ಉದಯೋನ್ಮುಖರು


ಯುವಕರನ್ನು ಹುಚ್ಚೆಬ್ಬಿಸಿರುವ ಯೂಟ್ಯೂಬ್ ಕೋಗಿಲೆ ವಿದಿಶಾ
0

ಈ ಹುಡುಗೀನ ಎಲ್ಲೋ ನೋಡ್ದಂಗಿದೆಯಲ್ಲಾ ಅಂತ ಯೋಚಿಸ್ತಿದ್ದೀರಾ. ಫೇಸ್‌ಬುಕ್ಕಲ್ಲಿ ಹಾಡ್ತಾ ಇರೋ ಕೋಗಿಲೆ ಇದು. ಈಗಾಗಲೆ ಹಾಡಿಹಾಡಿ ಜನಪ್ರಿಯವಾಗಿದ್ದಾರೆ. ಮ್ಯೂಸಿಕ್ ಇಲ್ದೆ ಇವರು ಹಾಡಿರುವ ಹಾಡಿನ ವಿಡಿಯೋಗಳು ಫೇಸ್‌ಬುಕ್ಕಲ್ಲಿ ಸೂಪರ್ ಹಿಟ್ ಆಗಿವೆ.ಒಂದೊಂದ್ ವಿಡಿಯೋನ ಏನಿಲ್ಲಾ ಅಂದ್ರೂ 50 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಈಕೆಯ ಕಂಠಕ್ಕೆ ತಲೆದೂಗಿದ್ದಾರೆ. ಇಷ್ಟಕ್ಕೂ ಈ ಹಾಡು ಹಕ್ಕಿ ಯಾವುದು ಅಂತೀರಾ? ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿದಿಶಾ ಓದಿದ್ದು ಇನ್ಫಾರ್ಮೇಶನ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್.

ದಕ್ಷಿಣ ಕನ್ನಡದ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಗಿಸಿ ಬಳಿಕ ಐರ್ಲೆಂಡಿನಲ್ಲಿ ಸ್ನಾತಕೋತ್ತರ(MS) ಪದವಿಯನ್ನೂ ಪಡೆದು ಈಗ ಅಲ್ಲಿಯೇ ಕೆಲಸದಲ್ಲಿದ್ದಾರೆ.ಇವರು ಹಾಡಿರುವ ಮುಂಗಾರು ಮಳೆ 2 ಸೇರಿದಂತೆ ಇನ್ನಿತರೆ ಹಾಡುಗಳನ್ನ ಫ್ರೆಂಡ್ಸ್ ಶೇರ್ ಮಾಡ್ಕೊಳ್ಳೋದು ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪಲ್ಲಿ. ಅಪರೂಪಕ್ಕೊಮ್ಮೆ ಫೇಸ್‌ಬುಕ್‌ನಲ್ಲೂ ಹಾಕ್ಕೋತಾರೆ. ಇವ್ರ ಮುದ್ದಾದ ಮುಖ ನೋಡ್ತಾ ಹಾಡುಗಳನ್ನ ಕೇಳ್ತಾ ಮೈಮರೆತವರೆಷ್ಟೋ.ಸುಮಾರು ಎರಡು ವರ್ಷಗಳಿಂದ ಹಾಡ್ತಾ ಇರೋ ಈ ಕೋಗಿಲೆ ಮೊನ್ನೆ ಹಾಡಿದ ಮುಂಗಾರು ಮಳೆ 2 ಚಿತ್ರದ ಗಮನಿಸು ನೀನು ಒಮ್ಮೆ ಅನ್ನೋ ಹಾಡು ವೈರಲ್ ಆಗೋಯ್ತು. ಅಲ್ಲಿಂದ ಈ ಎಲೆಮರೆಯ ಕೋಗಿಲೆ ಬೆಳಕಿಗೆ ಬಂತು.

ಇವರು ಹೆಚ್ಚಾಗಿ ಶ್ರೇಯಾ ಘೋಶಾಲ್ ಹಾಡಿರುವ ಹಾಡುಗಳನ್ನೇ ಆಯ್ಕೆ ಮಾಡಿಕೊಂಡಿರೋದು ವಿಶೇಷ. ಹಾಗಾಗಿ ಜೂ. ಶ್ರೇಯಾ ಘೋಶಾಲ್ ಅನ್ನೋದಕ್ಕೆ ಅಡ್ಡಿಯೇನಿಲ್ಲ .ಈಕೆ ಹಾಡಿರೋ ಒಂದೊಂದ್ ಹಾಡಿನ ಲೈಕ್ಸ್, ಶೇರ್ಸ್, ಕಾಮೆಂಟ್ಸು ನೋಡಿದ್ರೆ ತಲೆ ಗಿರ್ರನ್ನತೆ. ಐರ್ಲೆಂಡಿನ Deloitte ನಲ್ಲಿ ಕನ್ಸಲ್ಟೆನ್ಸಿ ಕೆಲಸ ಮಾಡ್ತಾ ಬಿಡುವಾದಾಗ ಒಂದೊಂದು ಹಾಡನ್ನು ಹಾಡಿ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದಾರೆ.ಅಂದಹಾಗೆ ಇವರೇನು ಪ್ರೊಫೆಷನಲ್ ಸಿಂಗರ್ ಅಲ್ಲ. ಹಾಡೋದು ಇವರ ಹವ್ಯಾಸ. ಈಗ ಇದೇ ಇವರನ್ನ ಜನಪ್ರಿಯವಾಗಿಸಿದೆ. ಮುಂದೆ ಸಿನಿಮಾದಲ್ಲಿ ಹಾಡೋ ಅವಕಾಶ ಸಿಕ್ಕಿದ್ರೆ ಹಾಡ್ತಾರಂತೆ.

 

1 year ago Udayonmukharuಟ್ಯಾಗ್ಗಳು : #songs
ನಿಮ್ಮ ಅಭಿಪ್ರಾಯಗಳು


Related Articles

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್