ಮನೋರಂಜನೆ

1 week ago news image
ಕನ್ನಡತಿಯ ಸಸ್ಪೆನ್ಸ್ ಥ್ರಿಲ್ಲರ್ "ವರ್ಣಿಕಾ"
ಸುದ್ದಿಗಳು/ ಮನೋರಂಜನೆ 0

ಕನ್ನಡದ ನಟಿ ಆದ್ಯಾಗೌಡ, (ಪೂರ್ಣಿಮಾ) ಅವರು ನಿರ್ದೇಶಕರಾಗಿ ಬಡ್ತಿ ಪಡೆದ ಚಿತ್ರವಿದು. "ವರ್ಣಿಕ" ಎಂಬ ಹೆಸರಿನ ಮೂಕಿ ಚಿತ್ರವನ್ನು ನಿರ್ದೇಶಿಸುತ್ತಿದ್ದು, "ರಂಗಿತರಂಗ" ಖ್ಯಾತಿಯ "ವಿಲಿಯಮ್ ಡೆವಿಡ್" ಅವರ ಕ್ಯಾಮರಾ ಕೈ ಚಳಕವಿದೆ. "ವರ್ಣಿಕಾ" ಎಂಬುದು ಸಂಸ್ಕೃತ ಭಾಷೆಯ ಶಬ್ದವಾಗಿದ್ದು, ಮಾಸ್ಕ್ ಎಂಬ ಅರ್ಥವನ್ನು ಕೊಡುತ್ತದೆ. ಇಷ್ಟು ದಿನ ಕೇವಲ ನಟಿಯಾಗಿದ್ದ ಇವರು ಈ ಚಿತ್ರದಲ್ಲಿ ಚಿತ್ರಕಥೆಯನ್ನು ಬರೆದು ನಿರ್ದೇಶನ ಮಾಡಿದುದಲ್ಲದೇ ಬಂಡವಾಳವನ್ನೂ ಹಾಕಿದ್ದಾರೆ.


ಈ ಚಿತ್ರದಲ್ಲಿ ಸಾಕಷ್ಟು ಕಲಾವಿದರಿದ್ದರೂ ಮಾತಿಲ್ಲ. ಬರೀ ಕಥೆಯಲ್ಲಿಯೇ ಎಲ್ಲವನ್ನೂ ಹೇಳುವ ಪ್ರಯತ್ನ ಚಿತ್ರತಂಡದ್ದು. ಏಕೆಂದರೆ "ವರ್ಣಿಕಾ" ಮೂಕಿ ಚಿತ್ರ. ಕಮಲ್ ಹಾಸನ್ ನಟನೆಯ "ಪುಷ್ಪಕ ವಿಮಾನ"ದ ಬಳಿಕ ಬರುತ್ತಿರುವ "ವರ್ಣಿಕಾ " ಚಿತ್ರ ಸಹ ಮೂಕಿ ಚಿತ್ರ. ಈಗ ಚಿತ್ರಿಕರಣಗೊಂಡು ಬಿಡುಗಡೆಯಾಗುವ ಹಂತಕ್ಕೆ ಬಂದಿದೆ.


ಅಗ್ರಜ , ಸುಬ್ರಮಣಿ, ಬೌಂಡ್ರಿ, ಮೃತ್ಯುಂಜಯ, ತಮಿಳಿನಲ್ಲಿ "ಪುರಿಯಾದ ಆನಂದಂ ಪುರಿಯಾದ ಆನಂದಂ" ಚಿತ್ರಗಳಲ್ಲಿ ಅಭಿನಯಿಸಿರುವ ಪೂರ್ಣಿಮಾ ಅಲಿಯಾಸ್ ಆದ್ಯ ಗೌಡ ಈ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುವದರ ಜೊತೆಗೆ  ಅಯ್ಯಪ್ಪ, ದೀಪ ಶ್ರೀ, ಹರ್ಷವರ್ಧನ , ರಾಹುಲ್, ಬೇಬಿ ಶಿಖಾ,  ಶೋಭರಾಜ , ಮತ್ತಿತರರು ನಟಿಸಿದ್ದಾರೆ.


ಇದೊಂದು ಸಸ್ಪೆನ್ಸ್ ಚಿತ್ರ. ಬೆಂಗಳೂರಿನಿಂದ ಮಡಿಕೇರಿಗೆ ಹೊರಟ ಸ್ನೇಹಿತರ ತಂಡದ ಒಬ್ಬಬ್ಬರೇ ಕಾಣೆಯಾಗುತ್ತಾರೆ. ಅದರಲ್ಲಿ ಕೆಲವರು ಸಾವನ್ನಪ್ಪುತ್ತಾರೆ. ಇದಕ್ಕೆ ಕಾರಣಗಳೇನು ಎಂಬುದು ಕಥೆ. ಈ ಚಿತ್ರ, ಜೇಮ್ಸ್ ಡೆವಿಡ್ ಹಿನ್ನಲೆ ಸಂಗೀತದಲ್ಲಿ , ಈ ಚಿತ್ರ ಹೊಸ ರೀತಿಯ ಅನುಭವ ನೀಡುವುದಂತೂ ಗ್ಯಾರಂಟಿ.


ಇನ್ನು ಪೂರ್ಣಿಮಾರ ಬಗ್ಗೆ ಹೇಳುವುದಾದರೇ , ಅಗ್ರಜ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ಶ್ರೀ ನಗರ ಕಿಟ್ಟಿ ಯೊಂದಿಗೆ "ಸುಬ್ರಮಣಿ" "ಇವಿಲ್ ಡೆಡ್" ಚಿತ್ರಗಳಲ್ಲಿ ಹೆಜ್ಜೆ ಹಾಕಿದವರು. ಇವರ ಮೂಲ ಹೆಸರು ಆದ್ಯ ಗೌಡ.. ಆದರೆ ಸಿನಿಮಾಕ್ಕಾಗಿ ಇಟ್ಟ ಹೆಸರು ಪೂರ್ಣಿಮಾ.. ಕನ್ನಡದಲ್ಲಿ ಮಹಿಳಾ ನಿರ್ದೇಶಕರು ಕಡಿಮೆಯಿದ್ದಾರೆ. ಆ ನಿಟ್ಟಿನಲ್ಲೂ ಭಿನ್ನವಾಗಿ ಯೋಚಿಸಿ, ವರ್ಣಿಕಾದಂತ ಮೂಕಿ ಚಿತ್ರ ಮಾಡಿದ ಇವರ ಪ್ರಯತ್ನವನ್ನು ಶ್ಲಾಘನಿಸಲೇಬೇಕು. ಇವರ ಈ ಪ್ರಯತ್ನಕ್ಕೆ ಶುಭವಾಗಲಿ, ಈ ಚಿತ್ರ ಸಧ್ಯದಲ್ಲಿಯೇ  ಬಿಡುಗಡೆಯಾಗಲಿದೆ..@ಸುನೀಲ ಜವಳಿ...

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್