ಮನೋರಂಜನೆ

1 week ago news image
ಪ್ರಥಮ್ ಗೆ ಸಿಕ್ಕ ವರ.. ದೇವ್ರಿದ್ದಾನೆ ಬಿಡು ಗುರು ಅಂದ್ರು ಒಳ್ಳೆ ಹುಡುಗ..
ಸುದ್ದಿಗಳು/ ಮನೋರಂಜನೆ 0

ಅಂತೂ ಇಂತೂ ಪ್ರಥಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಮೊನ್ನೆ ತಾನೇ ಸಿ.ಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೂ MLA ಸೀಟ್ ಬೇಕೆಂದು ಕೋರಿಕೊಂಡಿದ್ದರು. ಈಗ ಅವರ ನಟನೆಯ ಮೊದಲ ಚಿತ್ರ "ದೇವ್ರಂತ ಮನುಷ್ಯ" ಚಿತ್ರ ತೆರೆ ಕಾಣುವ ದಿನಾಂಕ ನಿಕ್ಕಿಯಾಗಿದೆ.


ಮುಂದಿನ ತಿಂಗಳ ಮೊದಲ ವಾರ, (ಪೆಬ್ರುವರಿ 2 ರಿಂದ) ಚಿತ್ರ ತೆರೆ ಕಾಣಲಿದ್ದು, ರಾಜ್ಯದ ನೂರೈವತ್ತಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.


"ದೇವ್ರಿದ್ದಾನೆ ಬಿಡು ಗುರು" ಚಿತ್ರದ ನಿರ್ದೇಶನಕ್ಕೆಂದು ಬಂದ ಪ್ರಥಮ್, ನಂತರದ ದಿನಗಳಲ್ಲಿ, ಬಿಸ್ ಬಾಸ್ ಸೀಸನ್ 4 ರ ಕಾರ್ಯಕ್ರಮದ ವಿನ್ನರ್ ಆಗಿ ಹೊರ ಹೊಮ್ಮಿ ಎಲ್ಲರ ಮನೆ ಮಗನಾದದ್ದು ಈಗ ಇತಿಹಾಸ. ನಂತರ ನಿರ್ದೇಶಕನಾಗುವ ಹಂಬಲವಿದ್ದರೂ, ನಿರ್ದೇಶಕನ ಕ್ಯಾಫ್ ಬದಿಗಿಟ್ಟು ಫುಲ್ ಟೈಮ್ ನಟರಾದರು.


ಇದೀಗ MLA, ಹಾಗೂ ಬಿಲ್ಡಪ್ ಚಿತ್ರಗಳ ಚಿತ್ರಿಕರಣ ನಡೆಯುತ್ತಿದ್ದು, ಮೊದಲ ಹಂತವಾಗಿ ಈ ಚಿತ್ರ ಬರಲಿದೆ. ಅದರಂತೆ ಶಂಕರ್ ಅಶ್ವಥ್, ಹಾಗೂ ಸತ್ಯಜೀತ್ ಅವರ ನೆರವಿಗೆ ಬಂದ ಪ್ರಥಮ್ ತಮ್ಮ ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಡಿಸಿದ್ದಾರೆ..

ಈ ಚಿತ್ರದಲ್ಲಿ ಶೃತಿ ಎಂಬ ನವ ನಾಯಕಿ ಕಾಣಿಸಿಕೊಂಡಿದ್ದು, ಕಿರಿಕ್ ಕೀರ್ತಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ .


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್