ಮನೋರಂಜನೆ

1 week ago news image
ಈ ವಾರ ತೆರೆಗೆ 2 ಚಿತ್ರಗಳು.
ಸುದ್ದಿಗಳು/ ಮನೋರಂಜನೆ 0

ಟೈಟಲ್ ನಿಂದಲೇ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಚಿತ್ರ "ಹಂಬಲ್ ಪೊಲಿಟಿಷಿಯನ್ ನೊಗರಾಜ್" . ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್, ರಕ್ಷಿತ್ ಶೆಟ್ಟಿ ನಿರ್ಮಿಸಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ. ದಾನಿಶ್ ಶೇಠ್ ನಾಯಕತ್ವದ ಮೊದಲ ಚಿತ್ರ ಇದಾಗಿತ್ತು, ಇವರಿಗೆ ಶೃತಿ ಹರಿಹರನ್ ಜೋಡಿಯಾಗಿದ್ದಾರೆ.

ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ, "ಮರಿ ಟೈಗರ್" ಚಿತ್ರ, ಅನಿವಾರ್ಯ ಕಾರಣಗಳಿಂದ ಬಿಡುಗಡೆಯಾಗಿರಲಿಲ್ಲ. ಇವತ್ತು ಈ ಚಿತ್ರ ಬಿಡುಗಡೆಯಾಗುತ್ತಿತ್ತು, ರಮೇಶ್ ಕಶ್ಯಪ್ ಅವರು ನಿರ್ಮಿಸಿದ್ದು, ಪಿ.ಎನ್ ಸತ್ಯ ನಿರ್ದೇಶಿಸಿದ್ದಾರೆ. ವಿನೋದ ಪ್ರಭಾಕರ್ ಗೆ ಜೋಡಿಯಾಗಿ ತೇಜು ಅಭಿನಯಿಸಿದ್ದಾರೆ. ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದು, ರವಿ ಸಂಗೀತ ನೀಡಿದ್ದು, ಜೈ ಆನಂದ ಅವರ ಛಾಯಾಗ್ರಹಣವಿದೆ.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್