ಮನೋರಂಜನೆ

1 week ago news image
ಜನಮೆಚ್ಚಿದ MTV ಗೆ ಸೂಪರ್ ಓಪನಿಂಗ್..
ಸುದ್ದಿಗಳು/ ಮನೋರಂಜನೆ 0

ಏನು ಆಶ್ಚರ್ಯ ಆಗಿರಬೇಕಲ್ಲ..?..

ಆದರೂ ಖಂಡಿತ ಇದು ನಿಜಾ. MTV ಅಂದರೆ, ಮರಿ ಟೈಗರ್ ವಿನೋದ ಪ್ರಭಾಕರ್ ನಟಿಸಿರುವ ಮರಿಟೈಗರ್ ವಿನೋದ್ ಚಿತ್ರ.


 

"ಮರಿಟೈಗರ್" ಚಿತ್ರ ಇವತ್ತು ಬೆಂಗಳೂರಿನ ಅನುಪಮಾ ಚಿತ್ರಮಂದಿರ ಸೇರಿದಂತೆ, ರಾಜ್ಯದ ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಭರ್ಜರಿ ಓಪನಿಂಗ್ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು  ಪಿ.ಎನ್ ಸತ್ಯ ನಿರ್ದೇಶಿಸಿದ್ದು, ರಮೇಶ್ ಕಶ್ಯಪ್ ನಿರ್ಮಿಸಿದ್ದಾರೆ.


ಅಪ್ಪ ಟೈಗರ್ ಪ್ರಭಾಕರರಂತೆಯೇ ಪಡಿಯಚ್ಚುವುಳ್ಳ ವಿನೋದ್ ಅವರು, ಕಳೆದ ದಶಕಗಳಿಂದ ಚಿತ್ರರಂಗದಲ್ಲಿದ್ದರೂ ಹೇಳಿಕೊಳ್ಳುವಂತ ಯಶಸ್ಸು ಸಿಕ್ಕಿರಲಿಲ್ಲ. ಇಂದು ಬಿಡುಗಡೆಗೊಂಡ "ಮರಿಟೈಗರ್" ಖಂಡಿತ ವಿನೋದ್ ಅವರಿಗೊಂದು ಯಶಸ್ಸು ತಂದು ಕೊಡುವಂತಿದೆ.


ವಿನೋದ್ ಗೆ ಜೋಡಿಯಾಗಿ ತೇಜು ಅಭಿನಯಿಸಿದ್ದು, ಟೈಸನ್ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಯಶಸನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ ವಿನೋದ್. ಟೈಟಲ್ ನೋಡಿ ಆ್ಯಕ್ಷನ್ ಚಿತ್ರ ಅನಿಸಿದರೂ ಸಹ ಇದೊಂದು ಫ್ಯಾಮಿಲಿ ಚಿತ್ರವಾಗಿದೆ..

Tags : ##-MTV
ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್