ಮನೋರಂಜನೆ

1 week ago news image
ಟ್ರೆಂಡ್ ಸೃಷ್ಟಿಸಿರುವ ಕೆ.ಜಿ.ಎಫ್ ಟೀಸರ್
ಸುದ್ದಿಗಳು/ ಮನೋರಂಜನೆ 0

ಕನ್ನಡದದಲ್ಲಿ ಅತಿ ಹೆಚ್ಚು ದುಬಾರಿ ಬಜೆಟ್ಟಿನಲ್ಲಿ ತಯಾರಾಗುತ್ತಿರುವ ಕೆ.ಜಿ.ಎಫ್ ಚಿತ್ರದ ಟೀಸರ್, ಮೊನ್ನೆ ಯಶ್ ಹುಟ್ಟು ಹಬ್ಬದಂದು ಬಿಡುಗಡೆಗೊಂಡಿತ್ತು. 1ನಿಮಿಷ 40 ಸೆಕೆಂಡ್ ನ ಈ ಟೀಸರ್ ಅನ್ನು ಈಗಾಗಲೇ 25 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ವೀಕ್ಷಿಸಿದ್ದಾರೆ.

ಅಭಿಮಾನಿಗಳನ್ನು ಹುಚ್ಚೆಬಿಸುವಂತೆ ಮೂಡಿ ಬಂದಿರುವ ಈ ಟೀಸರ್ ನಲ್ಲಿ ಅನಂತ್ ನಾಗ್ ಅವರು ಹಿನ್ನಲೆ ಧ್ವನಿ ನೀಡಿದ್ದಾರೆ.ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಂತೆ , ಅವಸರದಲ್ಲಿ ಈ ಚಿತ್ರದ ಸಣ್ಣ ಸಣ್ಣ ತುಣುಕುಗಳನ್ನು ಸೇರಿಸಿ ಟೀಸರ್ ಮಾಡಿದ್ದಾರೆ. ಈ ಹಿಂದೆ ಇವರು ಉಗ್ರಂ ಎಂಬ ಭ್ಲಾಕ್ ಬ್ಲಸ್ಟರ್ ಚಿತ್ರ ಕೊಟ್ಟಿದ್ದರು. ಹಾಗಾಗಿ ಇಲ್ಲಿ ಉಗ್ರಂ ಶೇಡ್ ನಂತೆ ಕಂಡು ಬಂದರೂ, ಇದಕ್ಕೆ ಬೇರೆಯದೇ ಆಯಾಮವಿದೆ ಹಾಗೂ ಎರಡು ಭಾಗಗಳಲ್ಲಿ ಬರುತ್ತಿದ್ದು,

ಮೊದಲಿಗೆ ಚಾಪ್ಟರ್ ಒಂದು ತೆರೆ ಕಾಣಲಿದೆ ಎಂದಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ಮಾರ್ಚ ವೇಳೆಗೆ ತೆರೆ ಕಾಣುವ ಸಾಧ್ಯತೆಗಳಿವೆ..

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್