ಮನೋರಂಜನೆ

1 week ago news image
ಜ.25ರಂದು ಚಿತ್ರರಂಗ ಸ್ಥಬ್ಧ; ಮಹದಾಯಿ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ
ಸುದ್ದಿಗಳು/ ಮನೋರಂಜನೆ 0

ಕೆಲ ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗ ಬಂದ್ ನಡೆದಿತ್ತು. ಇದೀಗ ಮತ್ತೊಮ್ಮೆ ಸ್ಯಾಂಡಲ್ ವುಡ್ ಸ್ಥಬ್ಧವಾಗಲಿದೆ. 

ಕಳಸಾ ಬಂಡೂರಿ ಹೋರಾಟದಲ್ಲಿ ಕನ್ನಡ ಚಿತ್ರರಂಗ ಭಾಗಿಯಾಗಿದ್ದು ಮಹಾದಾಯಿಗಾಗಿ ಈ ತಿಂಗಳ 25ರಂದು ಚಿತ್ರರಂಗ ಬಂದ್ ಆಗಲಿದೆ. 

ಉತ್ತರಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಕಳಸಾ ಬಂಡೂರಿ ಯೋಜನೆ ನೆನೆಗುದಿಗೆ ಬಿದ್ದಿದೆ. ಅದರಲ್ಲೂ ರಾಜಕೀಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಈ ತಿಂಗಳ 28ರಂದು ರಾಜ್ಯಕ್ಕೆ ಆಗನಿಸಲಿದ್ದು ಅವರ ಗಮನ ಸೆಳೆಯುವ ಉದ್ದೇಶದಿಂದ ಜನವರಿ 27ರಂದು ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿತ್ತು.  ಗಣರಾಜ್ಯೋತ್ಸವ ಸೇರಿದಂತೆ ಸಾಲುಸಾಲು ರಜೆ ಇರುವುದರಂದಾಗಿ ಈ ತಿಂಗಳ 25ರಂದು ಬಂದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. 

"ನಾಡು-ನುಡಿಗಾಗಿ ನಡೆಯುವ ಹೋರಾಟಗಳಲ್ಲಿ ಭಾಗಿಯಾಗುತ್ತಿರುವ ಕನ್ನಡ ಚಿತ್ರರಂಗ ಈ ಬಾರಿಯೂ ಮಹದಾಯಿಗಾಗಿ ನಡೆಯುವ ಬಂದ್ ಗೂ ಬೆಂಬಲ ಘೋಷಿಸಲಾಗಿದೆ" ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಪ್ರಕಟಿಸಿದ್ದಾರೆ.
ಅಂದು ಚಿತ್ರ ಪ್ರದರ್ಶನ ಇರುವುದಿಲ್ಲ. ಚಿತ್ರೀಕರಣವನ್ನು ಸ್ಥಗಿತ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರೈತರ ಹೋರಾಟಕ್ಕಾಗಿ ಹಾಗೂ ಅನ್ನದಾತರ ಪರ ನ್ಯಾಯಕ್ಕಾಗಿ ಇಡೀ ಚಿತ್ರರಂಗ ಸಾಥ್ ನೀಡಲಾಗಿದೆ ಎಂದು ಸಾ.ರಾ.ಗೋವಿಂದು ತಿಳಿಸಿದ್ದಾರೆ.
ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್