ಮನೋರಂಜನೆ

1 week ago news image
ಬಿಡುಗಡೆಯ ಕ್ಷಣಗಣನೆಯಲ್ಲಿ ವಿವಾದಿತ ಪದ್ಮಾವತ್ ಚಿತ್ರ..
ಸುದ್ದಿಗಳು/ ಮನೋರಂಜನೆ 0

ದೀಪಿಕಾ ಪಡುಕೋಣೆ ನಟನೆಯ "ಪದ್ಮಾವತ್" ಚಿತ್ರ, ಈಗ ಸೆನ್ಸಾರ್ ಸಂಕಷ್ಟದಿಂದ ಪಾರಾಗಿ, ಪದ್ಮಾವತ್ ಎಂದು ಟೈಟಲ್ ಸಹ ಬದಲಿಸಿಕೊಂಡರೂ ಬಿಡುಗಡೆ ಕಷ್ಟ ಎನ್ನಲಾಗುತ್ತಿದೆ. ಆದರೂ ಇದೇ ತಿಂಗಳ 25 ಕ್ಕೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದರ ಬೆನ್ನಲ್ಲೇ ರಾಜಸ್ಥಾನದ ಸಿ.ಎಂ ವಸುಂದರ ರಾಜೆ ಅವರು, ತಮ್ಮ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದು , ಗೋವಾ ಸರಕಾರ ಸಹ ಇದೇ ಮಾತು ಹೇಳಿದೆ. ರಜಪೂತ ಸಂಘಟನೆಗಳ ತೀವ್ರ ವಿರೋದವೂ ಇದಕ್ಕೆ ಕಾರಣವಾಗಿದೆ.

ಆದರೆ ಕರ್ನಾಟಕದಲ್ಲಿ ಈ ಚಿತ್ರದ ಬಿಡುಗಡೆಗೆ ಸಬಂದಪಟ್ಟಂತೆ ಯಾವುದೇ ರೀತಿ ಅಡ್ಡಿಗಳಿಲ್ಲ. ಗೃಹ ಸಚಿವರಾದ ರಾಮಲಿಂಗಾ ರೆಡ್ಡಿ ಅವರೂ ಸಹ ಮಾತನಾಡಿದ್ದು, "ಕನ್ನಡತಿ ದೀಪಿಕಾ ಪಡುಕೋಣೆ ಇಲ್ಲಿ ನಿರ್ದೇಶಕರ ಸೂಚನೆಯ ಮೇರಿಗೆ ಪಾತ್ರವನ್ನು ನಿರ್ವಹಿಸಿದ್ದಾರಷ್ಟೇ, ಹೀಗಾಗಿ ಬೆದರಿಕೆ ಹಾಕುವುದಊಉ ಸರಿಯಲ್ಲ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ರಜಪೂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಮಾತ್ರ ಈ ಪರಿಸ್ಥಿತಿ ಸೃಷ್ಟಿಯಾಗಿದೆ" ಎಂದಿದ್ದಾರೆ.

ಒಟ್ಟಿನಲ್ಲಿ ಈ ಚಿತ್ರದ ಭವಿಷ್ಯ ಏನಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು..

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್