ಮನೋರಂಜನೆ

1 week ago news image
ಖಡಕ್ ಲುಕ್ ನಲ್ಲಿ ಚಿರು ಸರ್ಜಾ..
ಸುದ್ದಿಗಳು/ ಮನೋರಂಜನೆ 0

ವಾಯುಪುತ್ರ ಚಿತ್ರದ ಮೂಲಕ ಆರಂಭವಾದ ಚಿರಂಜೀವಿ ಸರ್ಜಾರ ಸಿನಿ ಜರ್ನಿ ಈಗ "ಅಮ್ಮಾ ಐ ಲವ್ ಯೂ" ಹಾಗೂ "ಸಂಹಾರ" ಚಿತ್ರಗಳವರೆಗೂ ಬಂದಿದೆ. ರುದ್ರತಾಂಡವ ಚಿತ್ರದ ನಂತರ ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿರುವ ಚಿರು, ಅಮ್ಮಾ ಐ ಲವ್ ಯೂ ನಲ್ಲಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ತಣ್ಣನೆಯ ಕುತೂಹಲ ಉಂಟುಹಾಕಿದೆ.

ದ್ವಾರಕೀಶ ಚಿತ್ರ ನಿರ್ಮಾಣದಲ್ಲಿ ಅಮ್ಮಾ ಐ ಲವ್ ಯೂ ಮೂಡಿ ಬರುತ್ತಿದ್ದು, ಇದು ಇವರ ನಿರ್ಮಾಣದ 51 ನೇ ಚಿತ್ರವಾಗಿದೆ. ಕೆ.ಎಂ ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿರಂಜೀವಿ ಸರ್ಜಾಗೆ, ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಮೊದಲು ರೋಗ್ ಚಿತ್ರದ ನಿಶಾಂತ್ ಹಾಗೂ ಶಾನ್ವಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆಂದು ಹೇಳಲಾಗಿತ್ತು.

ಅಮ್ಮಾ ಐ ಲವ್ ಯೂ ಹೆಸರಿನ ಈ ಚಿತ್ರ ತಮಿಳಿನ ಪಿಚ್ಚಕಾರನ್ ಸಿನಿಮಾದ ರಿಮೇಕ್ ಆಗಿದ್ದು, ಸಿತಾರಾ, ಕರಿಸುಬ್ಬು, ಪ್ರಕಾಶ ಬೆಳವಾಡಿ , ಪ್ರಮುಖ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.

ಈ ಚಿತ್ರದ ಚಿತ್ರಿಕರಣ ಮಂಗಳೂರಿನ ಬಂದರು ಸ್ಥಳಗಳಲ್ಲಿ ನಡೆಯುತ್ತಿದೆ. ರವಿವರ್ಮ ಕಂಫೋಸ್ ಮಾಡಿರುವ ಸಾಹಸ  ದೃಶ್ಯಗಳಲ್ಲಿ ಚಿರು ಕಾಣಿಸಿಕೊಂಡಿದ್ದಾರೆ.

ಈ ಚಿತ್ರ ಯುಗಾಧಿ ಹಬ್ಬಕ್ಕೆ ತೆರೆ ಕಾಣುವ ಸಂಭವವಿದ್ದು ಮತ್ತೊಮ್ಮೆ ಕೆ.ಎಂ ಚೈತನ್ಯ ಹಾಗೂ ಚಿರು ಸರ್ಜಾ ಜೋಡಿ ಜಾದೂ ಮಾಡಲಿದೆ. ಈ ಹಿಂದೆ ಇವರ ಕಾಂಬಿನೇಷನನಲ್ಲಿ ಬಂದಂತ ಆಟಗಾರ, ಆಕೆ, ಚಿತ್ರಗಳು ಸೂಪರ್ ಹಿಟ್ ಆಗಿವೆ.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್