ಮನೋರಂಜನೆ

3 months ago news image
ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನೆಮಾ ಬರುತ್ತಿದೆ..! ಯಾವುದು ಅನ್ನೋದೇ ಸಸ್ಪೆನ್ಸ್..!
ಸುದ್ದಿಗಳು/ ಮನೋರಂಜನೆ 0

ಕನ್ನಡ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಈ ಸಲ ಹೊಸ ಚಿತ್ರದ ಮೂಲಕ ಹೊಸ ಪ್ರಯೋಗ ಮಾಡಲಿದ್ದಾರೆ. ಅದು ' ಹೊಸತನ' ದ ಮೂಲಕ. ಹೌದು.  ಹೊಸ ಪ್ರತಿಭೆಗಳನ್ನ ಒಟ್ಟುಗೂಡಿಸಿಕೊಂಡು ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ನಾಯಕ ನಾಯಕಿಯ ಹುಡುಕಾಟ ಶುರುವಾಗಿದ್ದು ಪ್ರೀ ಪ್ರೊಡಕ್ಷನ್ ನಲ್ಲಿ ಭಟ್ಟರು ಬ್ಯುಸಿಯಾಗಿದ್ದಾರೆ.

 ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ಡಿಸೆಂಬರ್ 6ರಂದು ಸೆಟ್ಟೇರಲಿದೆ. ಅಧಿಕ ಮಾಸ ಪ್ರಾರಂಭವಾಗುವ ಮುನ್ನ ಮುಹೂರ್ತ ಮುಗಿಸಲಿರುವ ಯೋಗರಾಜ್ ಭಟ್ ಮತ್ತು ತಂಡ ಆದಷ್ಟು ಬೇಗ ಚಿತ್ರೀಕರಣವನ್ನೂ ಶುರು ಮಾಡಲಿದೆ. 

ಯೋಗರಾಜ್ ಮೂವೀಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇನ್ನು ತಾಂತ್ರಿಕ ವರ್ಗದಲ್ಲಿ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಕ್ಯಾಮೆರಾ ವರ್ಕ್ ಸಿನಿಮಾಗಿರಲಿದೆ. ಮುಗುಳುನಗೆ ಸಿನಿಮಾದ ನಂತರ ನವ ಕಲಾವಿದರಿಗೆ ಹಾಗೂ ಟ್ಯಾಲೆಂಟೆಡ್ ಬರಹಗಾರರಿಗೆ ಅವಕಾಶ ಕೊಟ್ಟಿದ್ದಾರೆ. ಚಿತ್ರಕ್ಕೆ ಮಾಸ್ತಿ ಚಿತ್ರಕತೆ ಬರೆಯುತ್ತಿದ್ದಾರೆ. ಕಾಂತ್ ರಾಜ್ ರ ಕತೆಗೆ ಯೋಗರಾಜ್ ಭಟ್ ನಿರ್ದೇಶನ ಇದೆ

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್