ಮನೋರಂಜನೆ

3 months ago news image
‘ದಿ ವಿಲನ್’ ಟೀಸರ್ ರಿಲೀಸ್‌ಗೆ ಶುರುವಾಗಿದೆ ಕ್ಷಣಗಣನೆ
ಸುದ್ದಿಗಳು/ ಮನೋರಂಜನೆ 0

ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷೆಯನ್ನು ಹುಟ್ಟುಹಾಕಿರೋ ಚಿತ್ರ ದಿ ವಿಲನ್.. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಈಗಾಗ್ಲೇ ಅಭಿಮಾನಿಗಳು ಚಿತ್ರದ ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ.. ಆದ್ರೆ ಈ ಚಿತ್ರದಲ್ಲಿ ಯಾರು ವಿಲನ್ ಯಾರೂ ಹಿರೋ ಅನ್ನೋದನ್ ಮಾತ್ರ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.. ಇನ್ನು ಒಂದು ಸಿಹಿ ಸುದ್ದಿಯನ್ನ ಪ್ರೇಮ್ ಹಂಚಿಕೊಂಡಿದ್ದಾರೆ.. ಅದೇನು ಸುದ್ದಿ ಅಂತೀರಾ..? ಜಸ್ಟ್ ಹ್ಯಾವ್ ಎ ಲುಕ್..

ಎಸ್.. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ದಿ ವಿಲನ್ ಚಿತ್ರದ ಪೋಸ್ಟರ್‌ನ್ನು ಈ ಹಿಂದೆ ಇಡೀ ಚಿತ್ರತಂಡ ಬಿಡುಗಡೆ ಮಾಡಿತ್ತು.. ಚಿತ್ರದ ಪೋಸ್ಟರ್ ರಿವೀಲ್ ಆಗಿದ್ದೇ ಆಗಿದ್ದು, ಪೋಸ್ಟರ್‌ನಲ್ಲಿರೋ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಹೇರ್‌ಸ್ಟೈಲ್‌ನ್ನು ಟ್ರೆಂಡ್ ಮಾಡಿದ್ರು.. ಇಲ್ಲೇ ಅರ್ಥವಾಗುತ್ತೆ ನಿರ್ದೇಶಕ ಪ್ರೇಮ್ ಏನೇ ಮಾಡಿದ್ರು ಅದು ಟ್ರೆಂಡ್‌ಸೆಟ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ..

ಶಿವರಾಜ್‌ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವ್ರ ಹೇರ್‌ಸ್ಟೈಲ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿದ್ದು ಆಯ್ತು.. ಇನ್ನು ನಿರ್ದೇಶಕ ಪ್ರೇಮ್ ಸಿನಿಮಾದ ಚಿತ್ರೀಕರಣದ ಬಗ್ಗೆ ಪ್ರತಿ ಹಂತದಲ್ಲಿ ಮಾಹಿತಿ ನೀಡ್ತಾ ಬಂದಿದ್ದಾರೆ ಹಾಗೆನೇ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಿಗೆ ಇದೀಗ ಮತ್ತೊಂದು ಸ್ವೀಟ್ ನ್ಯೂಸ್ ನೀಡಿದ್ದಾರೆ ನಿರ್ದೇಶಕ ಪ್ರೇಮ್..

ಹೌದು.. ಮಲ್ಟಿಸ್ಟಾರ್ ನಟಿಸಿರು ದಿ ವಿಲನ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಸದ್ಯದ ಸ್ವೀಟ್ ನ್ಯೂಸ್ ಏನಪ್ಪಾ ಅಂದ್ರೆ..? ವಿಲನ್ ಸಿನಿಮಾದ ಟೀಸರ್‌ನ್ನು ಇದೇ ವಾರ ರಿಲೀಸ್ ಮಾಡೋ ಪ್ಲಾನ್‌ನಲ್ಲಿದೆ ಚಿತ್ರತಂಡ.. ಚಿತ್ರದ ಫಸ್ಟ್ ಲುಕ್ ಅಷ್ಟೋಂದು ಕ್ಯೂರಿಯಾಸಿಟಿಯನ್ನ ಬಿಲ್ಡ್ ಮಾಡಿತ್ತು ಆದ್ರೀಗ ಟೀಸರ್ ಅಂದ್ರೆ ಅದೇಷ್ಟು ಕುತೂಹಲವನ್ನ ಕೆರಳಿಸುತ್ತೋ ವೇಟ್ ಮಾಡೇ ನೋಡ್ಬೇಕು.. 

ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್.. ರೋಗ್ ಚಿತ್ರದ ನಂತರ ವಿಲನ್ ಸಿನಿಮಾಗೆ ಬಂಡವಾಳ ಹೂಡಿರೋ ನಿರ್ಮಾಪಕ ಸಿನಿಮಾದ ಸೆಟ್‌ಗಳಲ್ಲಿ ಆಗಾಗ ಕಾಣಿಸಿಕೊಂಡಿದ್ಧಾರೆ.. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಇದೇ ಫಸ್ಟ್ ಟೈಮ್ ಕನ್ನಡದಲ್ಲಿ ನಟಿಸ್ತಿದ್ದಾರೆ ಆಮಿ ಜಾಕ್ಸನ್..

ಇದೇ ವಾರ ದಿ ವಿಲನ್ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಟೀಸರ್ ನೋಡುವ ನಿರೀಕ್ಷೆಯಲ್ಲಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಾಯ್ತಿದ್ದಾರೆ.. ತಮ್ಮ ನೆಚ್ಚಿನ ನಾಯಕನ ಎಂಟ್ರಿ ಹಾಗೂ ಸಿನಿಮಾದ ಆಕ್ಷನ್ ಬಗ್ಗೆ ಈಗಾಗ್ಲೇ ಕಲ್ಪನೆಗಳು ಗಾಂಧಿನಗರದಲ್ಲಿ ಶುರುವಾಗಿವೆ.. ಚಿತ್ರದ ಯಾರಿಗೆ ಯಾರು ವಿಲನ್..? ಯಾರಿಗೆ ಯಾರು ನಾಯಕರು ಅನ್ನೋದು ಮಾತ್ರ ಸಸ್ಪೆನ್ಸ್ ಆಗಿಯೇ ಉಳಿದೆ.. ಇನ್ನು ಕೇವಲ ಒಂದೇ ಟೀಸರ್ ರಿಲೀಸ್ ಆಗ್ತಿಲ್ಲ ಶಿವಣ್ಣನ ಕುರಿತಾದ ಒಂದು ಟೀಸರ್ ಆದ್ರೆ, ಸುದೀಪ್ ಕುರಿತಾದ ಮತ್ತೊಂದು ಟೀಸರ್ ರಿಲೀಸ್ ಮಾಡೋ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಪ್ರೇಮ್..


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್