ಮನೋರಂಜನೆ

3 months ago news image
ಟೀಸರ್ ಮೂಲಕ ಗಮನ ಸೆಳೆಯುತ್ತಿರೋ ಚಮಕ್ ಚಿತ್ರ
ಸುದ್ದಿಗಳು/ ಮನೋರಂಜನೆ 0

ಚಮಕ್ ಚಿತ್ರದ ಹಾಡಿಗೆ ಕ್ಲೀನ್ ಬೌಲ್ಡ್ ಆದ ಟಾಲಿವುಡ್ ಅರ್ಜುನ ರೆಡ್ಡಿ, ವಿಜಯ್ ದೇವರಕೊಂಡ ಬಿಡುಗಡೆ ಮಾಡಿದ್ರು ಚಮಕ್ ಸಾಂಗ್ಸ್. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಚಿತ್ರದ ಹಾಡುಗಳು ಅದ್ದೂರಿಯಾಗಿ ಬಿಡುಗಡೆಯಾಗಿದ್ದು ಚಮಕ್ ಚಿತ್ರಕ್ಕೆ ಟಾಲಿವುಡ್ ಹಿರೋ ಸಾಥ್ ಕೊಟ್ಟಿದ್ದಾರೆ. ಹಾಗಾದ್ರೆ ಹಾಡುಗಳು ಹೇಗಿವೆ ? ಚಿತ್ರದ ಕುರಿತು ಅರ್ಜುನ್ ರೆಡ್ಡಿ ವಿಜಯ್ ಏನಂದ್ರು? ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ

ಚಮಕ್.. ಟೈಟಲ್‌ನಿಂದ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದ ಸಿನಿಮಾ. ಅದ್ರಲ್ಲೂ ಚಮಕ್ ಕೊಡೋದಕ್ಕೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಇರ್ತಾರೆ ಅಂದ್ರೆ ಆ ಚಿತ್ರಕ್ಕಿರುವ ಕುತೂಹಲ ಇನ್ನೂ ಹೆಚ್ಚಿರುತ್ತೆ ಬಿಡಿ, ಕಳೆದವಾರವಷ್ಟೆ ಫಸ್ಟ್‌ನೈಟ್ ಟೀಸರ್ ಬಿಡುಗಡೆ ಮಾಡಿ ಚಮಕ್ ಕೊಟ್ಟಿದ್ದ ಚಿತ್ರತಂಡ. ಟಿಸರ್ ಮೂಲಕ ಸಿನಿ ಅಭಿಮಾನಿಗಳನ್ನ ತನ್ನತ್ತ ಸೆಳೆಯುವಲ್ಲಿ ರೇಸ್‌ನಲ್ಲಿದೆ.

ನಿನ್ನೆ ಈ ಚಮಕ್ ಚಿತ್ರದ ಅದ್ದೂರಿ ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ, ಪಾಸಿಟಿವ್ ಹೋಪ್‌ನಲ್ಲಿದೆ ಅದಕ್ಕೆ ಕಾರಣ ಟಾಲಿವುಡ್ ಹೀರೋ ಟರ್ಜುನ್ ರೆಡ್ಡಯ ಚಿತ್ರದ ನಾಯಕ ವಿಜಯ್ ದೇವರಕೊಂಡ ಚಮಕ್ ಚಿತ್ರದ ಟೀಸರ್ ನೊಡಿ ಮೆಚ್ಚಿಕೊಂಡು ಈ ಚಿತ್ರದ ಹಾಡುಗಲನ್ನ ಬಿಡುಗಡೆ ಮಾಡಲು ಕರ್ನಾಟಕ್ಕೆ ಬಂದಿದ್ರು. ತುಮಬಾ ಖುಷಿಯಿಂದಲೇ ಚಿತ್ರದ ಬಗ್ಗೆ ಮಾತನಾಡಿದ ವಿಜಯ್ ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಶುಬಕೋರಿದ್ರು.

ಇನ್ನೂ ಚಮಕ್ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಎಲ್ಲಾ ಹಾಡುಗಳು ಸೂಪರಾಗಿ ಮೂಡಿಬಮದಿವೆ. ಈ ಹಿಂದೆ ಆಪರೇಷನ್ ಅಲಮೇಲಮ್ಮ ಚಿತ್ರಕ್ಕೆ ಸಮಗಿತ ಸಂಯೋಜನೆ ಮಾಡಿದ್ದ ಜುಡಾ ಸ್ಯಾಂಡಿ ಮತ್ತೆ ನಿರ್ದೇಶಕ ಸುನಿ ಜೊತೆ ಚಮಕ್ ಹಾಡುಗಲನ್ನ ನೀಡಿದ್ದಾರೆ. ಇಗಾಗ್ಲೆ ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿವೆ.

ಇನ್ನೂ ಈ ಮೊದಲೆ ಹೇಳಿದಂತೆ ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ದಿನಾಂಕದಂದೇ ಈ ಚಮಕ್ ಚಿತ್ರವೂ ಕೂಡಾ ಬಿಡುಗಡೆಯಾಗ್ತಿದೆ. ಹಾಗಾಗಿ ಗಣೇಶ್ ಮತ್ತು ಚಿತ್ರತಂಡ ತುಂಬಾ ಖುಷಿಯಲ್ಲಿತ್ತು. ಮುಂಗಾರು ಮಳೆ ಚಿತ್ರ ಮಾಡಿದ ಮೋಡಿ ಅಂತಿಂತದ್ದಲ್ಲಾ, ಈ ಚಮಕ್ ಕೂಡಾ ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುತ್ತಿದ್ದು ಅದೇ ರೀತಿಯಲ್ಲಿ ಸಿನಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಚಮಕ್ ಕೊಡೋಕೆ ಸಜ್ಜಾಗಿದೆ.

ಅಂದ್ಹಾಗೆ ನಿರ್ದೇಶಕ ಸಿಂಪಲ್ ಸುನಿ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ಗೊಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಚಮಕ್ ಕೊಡಲು ಸಜ್ಜಾಗಿದ್ರೆ, ಕಿರಿಕ ಹುಡುಗಿ ರಶ್ಮಿಕಾ ಮಂದಣ್ಣ ಗಣಿಗೆ ಜೊಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ, ಟೈಟಲ್ಲೇ ಹೇಳುವಂತೆ ಚಿತ್ರದ ತುಂಬಾ ಸಾಕಷ್ಟು ಚಮಕ್‌ಗಳು ಇರುತ್ತವೆ ಎನ್ನುವುದು ಚಿತ್ರತಂಡದ ಮಾತು.

ಇದೇ ಫಸ್ಟ್ ಟೈಮ್ ಒಂದಾದ ನಿರ್ದೇಶಕ ಹಾಗೂ ನಾಯಕರ ಜೋಡಿ ಹೇಗಿರುತ್ತೆ ಅನ್ನೋದೆ ಕ್ಯುರಿಯಾಸಿಟಿ ವಿಚಾರ.. ಕಿರಿಕ್ ಹುಡುಗಿ ಜೊತೆ ಮುಗುಳುನಗೆಯ ಹುಡುಗನನ್ನ ತೆರೆಯ ಮೇಲೇ ನೋಡಬೇಕಾದ್ರೆ ಡಿಸೆಂಬರ್ ೨೯ರ ವರೇಗೂ ಕಾಯಲೇಬೇಕು. ತೆರೆಗೆ ಬಂದ ನಂತ್ರ ಚಮಕ್ ಚಿತ್ರ ಹೇಗೆ ಚಮತ್ಕಾರ ಮಾಡುತ್ತೆ ಅಂತಾ ಇನ್ನೇನು ಸದ್ಯದಲ್ಲೇ ತಿಳಿಯಲಿದೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್