ಮನೋರಂಜನೆ

3 months ago news image
ಎಲ್ಲೇ ಹೋದರು ಸ್ನೇಹಿತರಿಗೆ ಕನ್ನಡದ ಹಾಡನ್ನ ಕಲಿಸುತ್ತಾರೆ ರಶ್ಮಿಕಾ
ಸುದ್ದಿಗಳು/ ಮನೋರಂಜನೆ 0

ಟಾಲಿವುಡ್ ನಟನಿಗೆ ಕಿರಿಕ್ ಹುಡುಗಿ ಕಲಿಸಿದಳು ಕನ್ನಡದ ಹಾಡು, ಸೂಪರ್ ಆಗಿ ಹಾಡು ಹೇಳುತ್ತಾರೆ ಈ ಅರ್ಜುನ್ ರೆಡ್ಡಿ. ನಾನು ಎಲ್ಲೇ ಹೋದರು ಎಲ್ಲರಿಗೂ ಈ ಹಾಡನ್ನ ಕಲಿಸುತ್ತೆನೆ ಅಂತಾಳೆ ಕಿರಿಕ್ ರಶ್ಮಿಕಾ. ಹಾಗಾದ್ರೆ ಕಿರಿಕ್ ಹುಡುಗಿ ಟಾಲಿವುಡ್‌ನಲ್ಲಿ ಯಾರು ಯಾರಿಗೆ ಕನ್ನಡದ ಹಾಡನ್ನ ಕಲಿಸಿದ್ದಾರೆ? ಕನ್ನಡದ ಹಾಡನ್ನ ಸೂಪರ್ ಆಗಿ ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡ ಆ ನಟನ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ನಿಮಗಾಗಿ.

ಕಿರಿಕ್ ಪಾರ್ಟಿ ಚಿತ್ರದಿಂದ ಕಿರಿಕ್ ಹುಡುಗಿ ಅಂತಲೇ ಪೇಮಸ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ಎಲ್ಲ ಮನೆ ಮಾತಾಗಿರುವ ಹುಡುಗಿ, ಕಿರಿಕ್ ಪಾರ್ಟಿ ಚಿತ್ರ ಸಕ್ಸ್‌ಸ್ ಆಗುತ್ತಿದ್ದಂತೆ ರಶ್ಮಿಕಾರಿಗೆ ಹಲವಾರು ಆಫರ್‌ಗಳು ಹುಡುಕಿಕೊಂಡು ಬಂದ್ವು, ಅದು ಕನ್ನಡದಲ್ಲಿ ಮಾತ್ರವಲ್ಲದೇ ಪಕ್ಕದ ರಾಜ್ಯದ ಟಾಲಿವುಡ್‌ನಿಂದ್ಲೂ ಆಪರ‍್ಸ್‌ಗಳು ಬಂದಿವೆ, ಈಗಾಗ್ಲೇ ತೆಲುಗಿನಲ್ಲಿ ಚಲೋ ಅನ್ನೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ನಟಿಯ ಚಿತ್ರ ಇದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ.

ಸದ್ಯ ಇದೇ ತಿಂಗಳಲ್ಲಿ ಚಮಕ್ ಅಂಜನಿ ಪುತ್ರ ಮತ್ತು ತೆಲುಗು ಚಿತ್ರ ಸೇರಿದಂತೆ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹೊಸ ವಿಷಯ ಏನಪ್ಪಾ ಅಂದ್ರೆ ಈ ಕಿರಿಕ್ ಹುಡುಗಿ ಎಲ್ಲೇ ಹೋದ್ರು ತಮ್ಮ ಕಿರಿಕ್ ಚಿತ್ರದ ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ ಹಾಡನ್ನ ಕಲಿಸುತ್ತಾರಂತೆ. ಈಗಾಗ್ಲೇ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ತೆಲುಗು ನಟ ವಿಜಯ್ ದೇವರಕೊಂಡ ಅವರಿಗೂ ಕೂಡಾ ಕಲಿಸಿದ್ದಾರೆ. ವಿಜಯ್ ಆ ಹಾಡನ್ನ ಹೇಗೆ ಹೇಳ್ತಾರೆ ಅಂತಾ ನಿವೇ ನೋಡಿ

ವಾವ್ ಎಷ್ಟು ಸೂಪರ್ ಆಗಿ ಕನ್ನಡದ ಹಾಡನ್ನ ಹಾಡುತ್ತಾರೆ ನೋಡಿ ಈ ನಟ. ಇದೇ ವಿಜಯ್ ದೇವರಕೊಂಡನ ಜೊತೆಯಲ್ಲಿ ರಶ್ಮಿಕಾ ಚಿತ್ರವೊಂದಕ್ಕೆ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಸೇರಿದಂತೆ ಹಲವಾರು ಸ್ನೇಹಿತರಿಗೆ ಈ ಹಾಡನ್ನು ಕಲಿಸಿರುವ ರಶ್ಮಿಕಾ, ವಿಜಯ್ ಹಾಡನ್ನು ಹೇಳಿರುವ ಬಗ್ಗೆ ಜೊತೆಗೆ ಈ ಹಾಡನ್ನು ಕಲಿಸಿದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

ಈಗಾಗ್ಲೇ ವಿಜಯ್ ದೇವರಕೊಂಡ ಅವರ ಜೊತೆಯಲ್ಲಿ ನಟಿಸುತ್ತಿರುವ ರಶ್ಮಿಕಾ ತುಂಬಾ ಖುಷಿಯಲ್ಲಿದ್ದಾರೆ.ಅದು ಕೂಡಾ ಕಥೆ ತುಂಬಾನೆ ಚನ್ನಾಗಿದೆ ಎಂಬುದು ರಶ್ಮಿಕಾ ಅಭಿಪ್ರಾಯ. ಜೊತೆಗೆ ಅರ್ಜುನ್ ರೆಡ್ಡಿ ಚಿತ್ರವನ್ನ ನೋಡಿದೆ ತುಂಬಾನೆ ಚನ್ನಾಗಿತ್ತು ವಿಜಯ್ ಒಳ್ಳೆಯ ನಟ ಹಾಗಾಗಿ ಒಪ್ಪಿಕೊಂಡಿದ್ದೆನೆ ಎನ್ನುವ ನಟಿ ರಶ್ಮಿPನ್ವಿಜಯ್ ದೇವರಕೊಂಡ ಕುರಿತು ಹೇಳಿದ್ದು ಹೀಗೆ

ಒಟ್ಟಿನಲ್ಲಿ ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕರ್ನಾಟಕದ ಮನೆ ಮಾತಾಗಿರುವ ನಟಿ ರಶ್ಮಿಕಾ ಮಂದಣ್ಣ, ಈಗ ಫುಲ್ ಬ್ಯುಸಿ ನಟಿ ಅದ್ರಲ್ಲೂ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ಅವಕಾಶಗಳನ್ನ ಪಡೆಯುವ ಮೂಲಕ ಕನ್ನಡದ ಹೆಮ್ಮೆಯನ್ನ ಹೆಚ್ಚಿಸುತ್ತಿರುವ ನಟಿ ಅಂತಾ ಹೇಳಬಹುದು.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್