ಮನೋರಂಜನೆ

3 months ago news image
ಮದುವೆಯಾಗಿಲ್ಲ, ಆದರೂ ಕಂಗನಾ ಅಜ್ಜಿಯಾದರು..!
ಸುದ್ದಿಗಳು/ ಮನೋರಂಜನೆ 0

ಬಾಲಿವುಡ್ ನಟಿ ಕಂಗನಾ ರಾವತ್ ವಿಭಿನ್ನ ಪಾತ್ರದಲ್ಲಿ ನಟಿಸುವುದರಲ್ಲಿ ಫೇಮಸ್. ಇದೇ ಬಾಲಿವುಡ್ 'ಕ್ವೀನ್' ಕಂಗನಾ  "ತೇಜು" ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಹೊಸ ಚಿತ್ರ.ಈ ಚಿತ್ರದಲ್ಲಿ ಕಂಗನಾ 80ರ ಹರೆಯದ ಮುದುಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಇದಷ್ಟೇ 

ಅಲ್ಲ, ಇಷ್ಟು ದಿನ ಕ್ಯಾಮೆರಾಗೆ ಫೋಸ್ ನೀಡುತ್ತಿದ್ದ ಈ ಚೆಲುವೆ ಈಗ ಕ್ಯಾಮೆರಾ ಮುಂದೆ-ಹಿಂದೆಯೂ ಕೆಲಸ ಮಾಡಲಿದ್ದಾರೆ. ಅಂದರೆ ನಿರ್ದೇಶನ ಇವರದ್ದೇ. ‘ಮಣಿ ಕರ್ಣಿಕಾ - ಝಾನ್ಸಿ ಕಿ ರಾಣಿ’ ಚಿತ್ರವನ್ನು ಪೋಸ್ಟ್‌ ಮಾಡಿ ಇನ್ನುಂದೆ ತಾನೇನಿದ್ದರೂ ತನ್ನ ನಿರ್ದೇಶನದ ಸಿನಿಮಾಗಳಲ್ಲೇ ನಟಿಸುತ್ತೇನೆ.

ಬೇರೆ ನಿರ್ದೇಶಕರ ಬಳಿ ಕೆಲಸ ಮಾಡಲ್ಲ ಅಂತ ಹೇಳಿಕೊಂಡಿದ್ದಾರೆ. ಆದರೆ ಈ ಮಾತು ಅಂತಿಮವೂ ಅಲ್ಲ. ಯಾಕಂದರೆ ಆಯುಷ್ಮಾನ್ ಖುರಾನ್ ಜೊತೆಗೆ ಚಿತ್ರ ಮಾಡಲು ಕಂಗನಾ ಈಗಾಗಲೇ ಒಪ್ಪಿಕೊಂಡಿದ್ದು, ಆ ಪಾತ್ರ ಮೆಚ್ಚಿಕೊಂಡಿದ್ದಾರಂತೆ. ಇನ್ನು ಇತ್ತೀಚಿಗೆ ಕಂಗನಾ 'ಮಣಿಕರ್ಣಿಕ' ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದರು.

ಹೈದರಾಬಾದ್ ನಲ್ಲಿ ಮಣಿಕರ್ಣಿಕ: ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಕಂಗನಾ ರಣಾವತ್ ಮತ್ತು ನಿಹಾರ್ ಪಾಂಡ್ಯ ನಡುವಿನ ಕತ್ತಿ ವರಸೆ ವೇಳೆ ಅಚಾನಕ್ ಆಗಿ ಕಂಗನಾ ರಣಾವತ್ ಅವರ ಹಣೆಗೆ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಂಗನಾ ಅವರ ಹಣೆಗೆ 15 ಸ್ಟಿಚ್ ಗಳನ್ನು ಹಾಕಲಾಗಿದ್ದು ಐದು ದಿನ ವಿಶಾಂತ್ರಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು.

ಈ ಚಿತ್ರವನ್ನು ಟಾಲಿವುಡ್ ನಿರ್ದೇಶಕ ಕ್ರಿಶ್ ಮಣಿಕರ್ಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. 

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್