ಮನೋರಂಜನೆ

3 months ago news image
'ಅಂಬಿ ನಿಂಗ್ ವಯಸ್ಸಾಯ್ತೋ' ಎಂದ ಆ ನಟಿ ಯಾರು..?
ಸುದ್ದಿಗಳು/ ಮನೋರಂಜನೆ 0

'ಅಂಬಿ ನಿಂಗ್ ವಯಸ್ಸಾಯ್ತೋ' .ಹೀಗೆ ಯಾರೋ ಹೇಳಿದ್ದಾರೆ ಅಂದುಕೊಂಡರಾ..? ಇಲ್ಲ ರೀ. ಇದು ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಹೊಸ ಚಿತ್ರ. ಈ ಚಿತ್ರದಲ್ಲಿ ಅಂಬರೀಶ್ ಜೊತೆಯಾಗಿ ಸುಹಾಸಿನಿ ಅಭಿನಯಿಸುತ್ತಿದ್ದಾರೆ. ಹಾಗೆಯೇ ಸುದೀಪ್ ಜೊತೆಯಲ್ಲಿ ನಾಯಕಿಯಾಗಿ ಅಭಿನಯಿಸೋದಕ್ಕೆ ನಟಿ ಶೃತಿ ಹರಿಹರನ್ ಆಯ್ಕೆಯಾಗಿದ್ದಾರೆ. ಎರಡು ವಾರಗಳ ಹಿಂದಷ್ಟೇ ಬಿಗ್ ಬಾಸ್ ಕಾರ್ಯಕ್ರಮದ ಕಿಚ್ಚನ್ ಟೈಂ ನಲ್ಲಿ ಕಾಣಿಸಿಕೊಂಡಿದ್ದ ನಟಿ ಶೃತಿ ಈಗ ಸುದೀಪ್ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. 

 ಕಡಿಮೆ ಸಮಯದಲ್ಲೇ ಅದ್ಬುತ ಕಲಾವಿದೆ ಎನ್ನುವ ಪಟ್ಟವನ್ನ ಪಡೆದುಕೊಂಡಿರುವ ನಟಿ ಶೃತಿ ಹರಿಹರನ್ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಶೃತಿ ಕೈನಲ್ಲಿ ಸಾಕಷ್ಟು ಸಿನಿಮಾಗಳಿವೆ. ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಮುಂದಾಗಿರುವ ಶೃತಿ ಕಿಚ್ಚನ ಜೊತೆ ನಾಯಕಿಯಾಗಿದ್ದಾರೆ.

ಶೃತಿ ಹರಿಹರನ್ ಅಭಿನಯಕ್ಕೆ ಬೌಲ್ಡ್ ಆಗದವರಿಲ್ಲ. ಮೂರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಶೃತಿ ಆಕ್ಟ್ ಮಾಡಿರುವ ಕನ್ನಡದ ದಿ ವಿಲನ್, ಟೆಸ್ಲಾ, ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್, ತಮಿಳಿನ ರಾ ರಾ ರಾಜಶೇಖರ್ ಚಿತ್ರಗಳು ಬಿಡುಗಡೆಯಾಗಬೇಕಿವೆ. ಇವುಗಳ ಜೊತೆಯಲ್ಲಿ ಈಗ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಶೃತಿ ಅಭಿನಯಿಸಲಿದ್ದಾರೆ.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು




ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್