ಮನೋರಂಜನೆ

3 months ago news image
ನಟ ಉಪೇಂದ್ರ ಮಂಗಳೂರಲ್ಲಿ ' ಏಕಾಂಗಿ' ಮಾತು..!
ಸುದ್ದಿಗಳು/ ಮನೋರಂಜನೆ 0

ನಟ ಉಪೇಂದ್ರ ಫುಲ್ ಬ್ಯುಸಿಯಾಗಿದ್ದಾರೆ. ಸ್ಪಲ್ಪ ಕಾಲ ಸಿನೆಮಾದಲ್ಲಿನ ನಟನೆಗೆ ಬ್ರೇಕ್ ನೀಡಿರುವ ಉಪೇಂದ್ರ ರಾಜಕೀಯ ಪಕ್ಷ ಕಟ್ಟುವಲ್ಲಿ ಬ್ಯುಸಿಯಾಗಿದ್ದಾರೆ. ಈ ನಿಮಿತ್ತ ಮಂಗಳೂರಿಗೆ ಭೇಟಿ ನೀಡಿದ್ದರು.

ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಏಕಕಾಲದಲ್ಲಿ  ಚುನಾವಣೆ ಬೇಡ ಎಂದು ನಟ, ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ, ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ಆದ್ರೆ ಪ್ರಾದೇಶಿಕ ಪಕ್ಷಗಳಿಗೆ ಬೆಲೆ ಸಿಗಲ್ಲ. ರಾಜ್ಯದ ಎಲ್ಲಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆ ಆಗಲಿ ಎಂದರು. ಸತ್ಯವಿದ್ದಲ್ಲಿ ಧರ್ಮವೂ ಇರುತ್ತದೆ. ಶಿಕ್ಷಣ , ವೈದ್ಯಕೀಯ ಸೌಲಭ್ಯ ಉಚಿತವಾಗಿ ದೊರೆತರೆ ಯಾರೂ ಭ್ರಷ್ಟಾಚಾರಿಗಳಾಗಲ್ಲ. ಪ್ರಸ್ತುತ, ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ ಯಾರಲ್ಲೂ ಇಲ್ಲ. ನಾನೂ ಒಬ್ಬ ಕಾರ್ಮಿಕನಾಗಿ ಮಾತನಾಡುತ್ತಿದ್ದೇನೆ. ಈ ದೇಶದಲ್ಲಿ ಶೇಕಡಾ 80ರಷ್ಟು  ಒಳ್ಳೆಯವರಿದ್ದು, ಅವರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ನಮ್ಮ ಪಕ್ಷಕ್ಕೆ 224 ಜನ ಸಿಎಂಗಳ ಅಗತ್ಯವಿದೆ. ಪಕ್ಷದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಮುಖ್ಯಮಂತ್ರಿಯ ರೀತಿ ಕೆಲಸ ಮಾಡಬೇಕಿದೆ ಎಂದು ನಟ ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್