ಮನೋರಂಜನೆ

3 months ago news image
ಶೃತಿ ಹರಿಹರನ್ ಗೆ ತೆಲುಗಿನಿಂದ ಬಂತು ಕರೆ..!
ಸುದ್ದಿಗಳು/ ಮನೋರಂಜನೆ 0
' ಲೂಸಿಯಾ' ಚಿತ್ರದ ಮೂಲಕ ಕಮಾಲ್ ಮಾಡಿದ ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಗೆ ಇದೀಗ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಈಕೆಯ ನಟನೆ ಸ್ಟೈಲ್​, ಡ್ಯಾನ್ಸ್​, ಪಟಪಟ ಮಾತು ಒಂದೇ ನೋಟಕ್ಕೆ ಆಕರ್ಷಿಸುತ್ತವೆ.
ರಾಟೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ತಾರಕ್​, ಉಪೇಂದ್ರ ಮತ್ತೆ ಬಾ ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಶೃತಿ ಹರಿಹರನ್ ತಮಿಳು, ಮಲಯಾಳಂ ನಲ್ಲೂ ಅಭಿನಯಿಸಿದ್ದಾರೆ.
ಮನರಂಜನಾತ್ಮಕ ಚಿತ್ರ ಹಾಗೂ ಕಲಾತ್ಮಕ ಚಿತ್ರಗಳಲ್ಲಿ ಯಾವುದೇ ಕೊರತೆ ಇಲ್ಲದೇ ನಟಿಸುವ ನಟಿ ಈಕೆ. ಹಾರ್ಡ್​ ವರ್ಕ್, ಡೆಡಿಕೇಷನ್​ ನೋಡಿದವರು ಈಕೆಗೆ ಅವಕಾಶ ಕೊಡುತ್ತಿದ್ದಾರೆ. ಇದೀಗ ತೆಲುಗು ಚಿತ್ರರಂಗದಲ್ಲೂ ನಟಿಸಲು ಶೃತಿ ಹರಿಹರನ್ ಗೆ ಅವಕಾಶ ಸಿಕ್ಕಿದೆ. ಈ ಚಿತ್ರದ ಶೂಟಿಂಗ್ ಜನವರಿಯಲ್ಲಿ ಶುರುವಾಗಲಿದೆ. ಚಿತ್ರದ ಹೆಸರು ಇನ್ನಷ್ಟೇ ರಿವಿಲ್​ ಆಗಬೇಕಿದೆ. ಶೃತಿ ಕೈ ತುಂಬ ಸಿನಿಮಾಗಳಿದೆ. ಇವುಗಳಲ್ಲಿ 
ಬಹುಪಾಲು ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳು ಅನ್ನೋದೇ ವಿಶೇಷ. 
ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು




ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್