ಮನೋರಂಜನೆ

2 months ago news image
‘ಸಮ್ಮರ್ ಹಾಲಿಡೇಸ್’ ಚಿತ್ರದಲ್ಲಿ ಕವಿತಾ ಲಂಕೇಶ್ ಪುತ್ರಿ ಈಶಾ ಲಂಕೇಶ್
ಸುದ್ದಿಗಳು/ ಮನೋರಂಜನೆ 0

ಸಮ್ಮರ್ ಹಾಲಿಡೇಸ್‌ನಲ್ಲಿ ಮಕ್ಕಳೂ ಜಾಲಿಯಾಗಿರ್ತಾರೆ ಅನ್ನೋದನ್ನ ಅಷ್ಟೇ ನೋಡಿರ್ತಿರಾ. ಇದೇ ಸಮ್ಮರ್‌ನಲ್ಲಿ ಮಕ್ಕಳು ಯಾವೆಲ್ಲಾ ಚಟುವಟುಕೆಯಲ್ಲಿ ತೊಡಗಿಕೊಂಡಿರ್ತಾರೆ ಎಂದು ಇಂಚಿಂಚು ಮಾಹಿತಿಯ ಮೂಲಕ ಕವಿತಾ ಲಂಕೇಶ್ ಚಿತ್ರವೊಂದನ್ನ ತೆರೆಯ ಮೇಲೆ ತರುತ್ತಿದ್ದಾರೆ ಅದೇ ಸಮ್ಮರ್ ಹಾಲಿಡೇಸ್. ಹಾಗಾದ್ರೆ ಈ ಸಮ್ಮರ್‌ನಲ್ಲಿ ಏನೆಲ್ಲ ಸ್ಪೇಷಾಲಿಟಿಸ್ ಇವೆ ಅಂತಾ ನೋಡೋಣ ಈ ಸ್ಟೋರಿಯಲ್ಲಿ.

ಸಮ್ಮರ್ ಹಾಲಿಡೇಸ್... ಹೀಗಂದ ತಕ್ಷಣ ಎಲ್ಲರಿಗೂ ನೆನಪಾಗೋದು ಸ್ಕೂಲ್‌ಗೆ ಹೋಗೋ ಮಕ್ಕಳು. ಬೆಸಿಗೆ ರಜೆಯಲ್ಲಿ ಮಕ್ಕಳು ಪ್ರೀಯಾಗಿ ತಮಗಿಷ್ಟಬಂದ್ಹಾಗೆ ಎಲ್ಲಾ ಸ್ನೇಹಿತರ ಜೊತೆಗೆ ಟ್ರಿಪ್ ಹೋಗೋದಾಗ್ಲಿ, ಆಟವಾಡುವುದರಲ್ಲಾಗಲಿ ಸಮಯ ಕಳೆಯುತ್ತಾರೆ. ಇದೇ ಸಮ್ಮರ್ ಹಾಲಿಡೇಸ್ ಅನ್ನೋ ಟೈಟಲ್ ಇಟ್ಟುಕೊಂಡು ನಿರ್ದೇಶಕಿ ಕವಿತಾ ಲಂಕೇಶ್ ಚಿತ್ರವೊಂದನ್ನ ಮಾಡಿದ್ದಾರೆ.ಇಂದು ಈ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆ ಮಾಡಲಾಯ್ತು.

ಇದು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗ್ತಿರೋ ಚಿತ್ರ.ಈಗೀನ ಮಕ್ಕಳು ಬೇಸಿಗೆ ರಜೆ ಸಿಕ್ಕರೆ ವಿಡಿಯೋ ಗೇಮ್, ಪೋನುಗಳಲ್ಲೇ ಸಮಯ ಕಳೆಯುತ್ತಾರೆ. ಜೊತೆಗೆ ಮನೆಯಲ್ಲಿ ಈಗೆಲ್ಲ ಹೇಗಿದೆ ಅಂದ್ರೆ ಇಂಗ್ಲೀಷ್ ಶಾಲೆಗಳಲ್ಲಿ ಮಕ್ಕಳು ಕಲಿಯುವುದು ಹೆಚ್ಚಾಗಿರುವುದರಿಂದ.ಇಂಗ್ಲೀಷ್ ಮಾತನಾಡುವುದೇ ಜಾಸ್ತಿ. ಈ ಎಲ್ಲ ಅಂಶಗಳನ್ನಿಟ್ಟುಕೊಂಡುಸಿಟಿಯಲ್ಲಿ ನಡೆಯುವ ಸನ್ನಿವೇಶಗಳೊಂದಿಗೆ ಈ ಚಿತ್ರವನ್ನ ಮಾಡಲಾಗಿದೆ ಎಂಬುದು ನಿರ್ದೇಶಕಿ ಕವಿತಾ ಲಂಕೇಶ್ ಮಾತು.

ಇನ್ನೂ ಬೆಂಗಳೂರು, ಮಂಗಳೂರು ಮತ್ತು ಕೊಪ್ಪ ದಂತಹ ಸುಂದರ ತಾಣಗಳಲ್ಲಿ ಸಮ್ಮರ್ ಹಾಲಿಡೇಸ್ ಚಿತ್ರದ ಚಿತ್ರೀಕರಣವಾಗಿದೆ, ಚಿತ್ರದಲ್ಲಿ ಕವಿತಾ ಲಂಕೇಶ್ ಅವರ ಪುತ್ರಿ ಈಶಾ ಲಂಕೇಶ್ ಮೊದಲ ಬಾರಿಗೆ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ಸೋನಿಯಾ ಮತ್ತು ಅನ್ಷಾಂಗ್ರೀ ಎಂಬ ಬಾಲ ನಟರು ಕಾಣಿಸಿಕೊಂಡಿದ್ದಾರೆ, ಇನ್ನೋಂದು ವಿಶೆಷ ಅಂದ್ರೆ ಬಹು ಭಾಷಾ ನಟ ಪ್ರಕಾಶ್ ರೈ, ಮತ್ತು ಸುಮನ್ ರಂಗನಾಥ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದು ಚಿತ್ರದ ಮೊದಲ ಪತ್ರಕಾಗೋಷ್ಟಿಯಲ್ಲಿ ಟ್ರೇಲರ್ ರಿಲೀಸ್ ಮಾಡಿರುವ ಚಿತ್ರತಂಡ, ಸದ್ಯದಲ್ಲೆ ದ್ವನಿಸುರುಳಿಯನ್ನು ಬಿಡುಗಡೆ ಮಾಡಿ ಡಿಸೆಂಬರ್ ತಿಂಗಳಲ್ಲಿ ಚಿತ್ರವನ್ನ ತೆರೆಗೆ ತರುವ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಚಿತ್ರ ತೆರೆಗೆ ಬಂದ ನಂತರ ಗಾಂಧಿನಗರದಲ್ಲಿ ಹೆಗೆಲ್ಲಾ ಸದ್ದು ಮಾಡುತ್ತೆ ಅಂತಾ ಕಾದುನೋಡಬೇಕು.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್