ಮನೋರಂಜನೆ

2 months ago news image
ಸ್ಯಾಂಡಲ್ ವುಡ್ ನಲ್ಲೊಬ್ಬಳು ಆಯಿಶಾ - ಈಕೆಯ ಹೊಸ ಚಿತ್ರ ಯಾವುದು..?
ಸುದ್ದಿಗಳು/ ಮನೋರಂಜನೆ 0

ಈಕೆ ಮಾದಕ ಬೆಡಗಿ. ಹೆಚ್ಚಿನವರಿಗೆ ಗೊತ್ತಿಲ್ಲದಿದ್ದರೂ ನಟನೆ ಸೂಪರ್.  'ಸ್ಯಾಂಡಲ್‍ವುಡ್‍ನ ಲೇಡಿ ಬ್ರೂಸ್ಲೀ ' ಎಂದೇ ಕರೆಸಿಕೊಳ್ಳುವ ನಟಿ ಆಯಿಶಾ ಚನ್ನಮ್ಮ ಐಪಿಎಸ್, ಒನಕೆ ಓಬವ್ವ, ಬೈರವಿಯಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ 'ಜನಗಣಮನ ' ಎಂಬ ಸಾಮಾಜಿಕ ಕಳಕಳಿ ಇರುವ ಚಿತ್ರದಲ್ಲಿ ಆಯಿಶಾ ಅಭಿನಯಿಸಲಿದ್ದಾರೆ‌. ಇದು ಕೂಡ ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದಲ್ಲಿ ಸಾಮಾನ್ಯ ಜನರು ಎದುರಿಸುವ ಸಮಸ್ಯೆಗಳ ವಿರುದ್ದ ಖಾಕಿ ತೊಟ್ಟು ಖಡಕ್​ ಪೊಲೀಸ್​ ಪಾತ್ರದಲ್ಲಿ ಆಯಿಶಾ ಮಿಂಚಲಿದ್ದಾರೆ. ಶಶಿಕಾಂತ್ ಈ ಚಿತ್ರದ ನಿರ್ದೆಶಕರು. ನಟಿ ಆಯಿಶಾ 10 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದಾರೆ. ಸಾಂಭಶಿವ ರೆಡ್ಡಿ ಈ ಚಿತ್ರದ ನಿರ್ಮಾಪಕರು. ಇವರು ಪರರಾಜ್ಯದವರು. ಈ ಚಿತ್ರದ ಹಾಡುಗಳು ಸೊಗಸಾಗಿದೆ. ಈ  ಸಿನಿಮಾದ ಮೇನ್​ ಅಟ್ರಾಕ್ಷನ್ ಆಗಿರುವ ಆಯಿಶಾ ಸಖತ್​ ಸ್ಟಂಟ್ಸ್​ ಹಾಗೂ ಏಳು ರೀತಿಯ ಫೈಟ್ಸ್ ಸೀನ್​ಗಳಿಗಾಗಿ ಸಿಕ್ಕಾಪಟ್ಟೆ ವರ್ಕೌಟ್​ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿಯಂತಹ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ. ರಿಲೀಸ್ ಮುನ್ನವೇ ಈ ಚಿತ್ರ ಟೀಸರ್​, ಟ್ರೈಲರ್​ ಮೂಲಕ ಗಮನ ಸೆಳೆದಿದೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್