ಮನೋರಂಜನೆ

2 months ago news image
ರಕ್ಷಿತ್ ಶೆಟ್ಟಿ ಹೊಸ ಸಿನೆಮಾ ಯಾವುದು ಗೊತ್ತೇ..?
ಸುದ್ದಿಗಳು/ ಮನೋರಂಜನೆ 0

ನಟ ರಕ್ಷಿತ್ ಶೆಟ್ಟಿ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ತನ್ನ ಪ್ರೊಡೆಕ್ಷನ್​ ಹೌಸ್​​ ಮೂಲಕ ಸಾಲು ಸಾಲು ಸಿನಿಮಾಗಳನ್ನ ಇವರು ನಿರ್ಮಿಸುತ್ತಿದ್ದಾರೆ.  ಅದರ ಜೊತೆಗೆ ರಕ್ಷಿತ್​ ಶೆಟ್ಟಿ, ನಟನೆಗಿಳಿದಿದ್ದಾರೆ. 'ಇವನೇ ಶ್ರೀಮನ್​​​​​ ನಾರಾಯಣ' ಇವರ ಹೊಸ ಸಿನೆಮಾ. ಈ ಚಿತ್ರದಲ್ಲಿ 80ರ ದಶಕ ಪೊಲೀಸ್​​​ ಪಾತ್ರದಲ್ಲಿ ರಕ್ಷಿತ್​​​​​ ಕಾಣಿಸಿಕೊಳ್ಳಲಿದ್ದಾರೆ. ಶಾನ್ವಿ ಶ್ರೀವಾತ್ಸವ್‌ ನಾಯಕಿಯಾಗಿದ್ದು, ಅಚ್ಯುತರಾವ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಈ ಸಿನೆಮಾಗೆ ಚಿತ್ರಕಥೆ ಇವರದ್ದೇ. ಅವನೇ ಶ್ರೀಮನ್ ನಾರಾಯಣ  ಸುಮಾರು 10 ಕೋಟಿ ರೂಪಾಯಿಯ ಬಿಗ್ ಬಜೆಟ್ ಸಿನಿಮಾವಾಗಿದೆ.  ಡಿಸೆಂಬರ್ ಒಳಗಡೆ ಸಿನಿಮಾ ಶೂಟಿಂಗ್ ಆರಂಭಿಸಲು ತಯಾರಿ ನಡೆಸಲಾಗುತ್ತಿದೆ. ಹಾಗೆಯೇ 2018ರ ಡಿಸೆಂಬರ್ ನಲ್ಲಿ ಚಿತ್ರ ರಿಲೀಸ್ ಆಗಲಿದೆ. 

 ಇದು 80ರ ದಶಕದ ಕಥೆಯನ್ನು ಹೊಂದಿದೆ. ರಕ್ಷಿತ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಮರಾವತಿ ಎಂಬ ಕಾಲ್ಪನಿಕ ಪಟ್ಟಣದಲ್ಲಿರುವ ಭ್ರಷ್ಟ ಪೊಲೀಸ್‌ ಆಫೀಸರ್‌ ಕತೆ ಈ ಚಿತ್ರದ್ದು. ಪಿರಿಯಾಡಿಕಲ್‌ ಮೂವಿಯಾಗಿರುವ ಇದರಲ್ಲಿ ರಸ್ತೆಗಳಲ್ಲಿ ಬೀದಿ ದೀಪ ಇಲ್ಲದ, ಎಲೆಕ್ಟ್ರಿಕ್ ಲೈಟ್ ಇಲ್ಲದ ದಿನಗಳ ಕಥೆ ಇದೆ. ಈ ಸಿನಿಮಾಗಾಗಿ ಉತ್ತರ ಕರ್ನಾಟಕದ ಹಲವು ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ನಿರ್ಧರಿಸಲಾಗಿದೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್