ಮನೋರಂಜನೆ

2 months ago news image
ಪೋಸ್ಟ್ ಪೋನ್ ಆಗಲಿದೆಯೇ ಪದ್ಮಾವತಿ ಬಿಡುಗಡೆ.?.
ಸುದ್ದಿಗಳು/ ಮನೋರಂಜನೆ 0

ಆರಂಭದಿಂದಲೂ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತಿ ಚಿತ್ರದ ವಿರುದ್ಧ ರಾಜ್ ಪುತ್ ಕರ್ಣಿ ಸೇನಾ ಭಾರಿ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಇದೀಗ ಚುನಾವಣೆಯ ಹಿನ್ನೆಲೆಯಲ್ಲಿ ಚಿತ್ರಬಿಡುಗಡೆಯನ್ನು ಮುಂದೂಡಬೇಕು ಎಂದು ನಿರ್ಮಾಪಕರು ಒತ್ತಡ  ಹೇರುತ್ತಿದ್ದಾರೆ.

ಕಳೆದ ದಿನ ಚಿತ್ರದ ಕುರಿತಂತೆ ಮಾತನಾಡಿದ್ದ ಶಾಹಿದ್ ಕಾಪೂರ್ ಮೊದಲು 'ಪದ್ಮಾವತಿ' ಚಿತ್ರ ನೋಡಿ, ಊಹಾಪೋಹಗಳಿಗೆ ಕಿವಿಗೊಡಬೇಡಿ ಬಳಿಕ ನಿರ್ಧಾರ ಕೈಗೊಳ್ಳಿ ಎಂದು ಪ್ರೇಕ್ಷಕರಲ್ಲಿ ಅವರು ಮನವಿ ಮಾಡಿದ್ದಾರೆ. ಚಿತ್ರದಲ್ಲಿ ರಾಣಿ ಪದ್ಮಾವತಿ ಅವರನ್ನ ಅವಹೇಳನ ಮಾಡುವ ಯಾವುದೇ ಸನ್ನಿವೇಶವಿಲ್ಲ ಎಂದು ಹೇಳಿದ್ದರು.

ಎಲ್ಲರನ್ನು ಖುಷಿಪಡಿಸಲು ಸಾಧ್ಯವಿಲ್ಲ. ನಾವೆಲ್ಲಾ ಒಂದು ಒಳ್ಳೆಯ ಚಿತ್ರವನ್ನು ಮಾಡಿದ್ದೇವೆ. ಯಾರನ್ನೂ ನೋವುಂಟು ಮಾಡುವುದು ನಮ್ಮ ಉದ್ದೇಶವಲ್ಲ ಎಂದವರು ಹೇಳಿದ್ದರು. ಚಿತ್ರದ ಟ್ರೈಲರ್‌ ರಿಲೀಸ್‌‌ ಆದಾಗಿನಿಂದಲೂ ಬಿಜೆಪಿ ಸೇರಿದಂತೆ ರಜಪೂತ ಸಮುದಾಯ ಹಾಗೂ

ಕೆಲ ಹಿಂದೂಪರ ಸಂಘಟನೆಗಳು ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಬಹು ನೀರಿಕ್ಷಿತ ಚಿತ್ರದಲ್ಲಿ ನಟ ಶಾಹಿದ್ ಕಪೂರ್ ರಾಜಾ ಮಹಾರಾವಾಲ್ ರತನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ದೀಪಿಕಾ ರತನ್ ಸಿಂಗ್‌ರ ರಾಣಿ ಪದ್ಮಾವತಿಯಾಗಿ ಅಭಿನಯಿಸಿದ್ದಾರೆ. ನಟ ರಣ್‌ವೀರ್‌ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್