ಮನೋರಂಜನೆ

2 months ago news image
' ಪದ್ಮಾವತಿ' ವಿರುದ್ಧದ ಹೊಸ ಆರೋಪ ಏನು ಗೊತ್ತೇ..?
ಸುದ್ದಿಗಳು/ ಮನೋರಂಜನೆ 0

ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ' ಪದ್ಮಾವತಿ' ವಿರುದ್ಧ ಮತ್ತೊಂದು ಆರೋಪ ಎದುರಾಗಿದೆ. ಕರಣಿ ಸೇನಾ ಸಮಿತಿ ಹೊಸ ಆರೋಪವೊಂದನ್ನ ಮಾಡಿದೆ.

ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡಲಾಗಿದೆ ಎಂಬುದು ಕರಣಿ ಸೇನಾ ಸಮಿತಿಯ ಆರೋಪ. ಹಿಂದೂ ಸಂಸ್ಕೃತಿ, ಉಡುಗೆ ತೊಡುಗೆಯನ್ನ ಮತ್ತು ಅಂಗಪ್ರದರ್ಶನವನ್ನ ತಿರುಚಿ ತೋರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ, ಅತ್ಯಾಚಾರಿ. ಈತನನ್ನು ಮುಖ್ಯ ನಾಯಕನನ್ನಾಗಿ ತೋರಿಸಿರುವುದು ಈ ಸಮಿತಿಯ ಕೋಪಕ್ಕೆ ಕಾರಣ. ಇದನ್ನ ಖಂಡಿಸಿ ಇದೇ ನವೆಂಬರ್

15 ರಂದು ಬೆಂಗಳೂರಿನ ಟೌನ್​ಹಾಲ್​ನಿಂದ ಫ್ರಿಡಂ ಪಾರ್ಕ್​ನವರೆಗೆ ಸ್ವಾಭಿಮಾನಿ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ.ಇನ್ನು ಈ ಚಿತ್ರದಲ್ಲಿ ರಾಣಿ ಪದ್ಮಾವತಿಯ ಚಾರಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಉದಯ್ ಪುರ ರಾಜವಂಶಸ್ಥರು ಆರೋಪಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರಲ್ಲಿ ದೇಶದ ಹೆಮ್ಮೆಯ ಇತಿಹಾಸವನ್ನು ರಕ್ಷಿಸುವ ಮತ್ತು ದೇಶದ ನಾಗರಿಕರ ಘನತೆ ಕಾಪಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕೆ ಇದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಹಾಗೂ ಸಿಬಿಎಫ್ ಸಿ ಮುಖ್ಯಸ್ಥ ಪ್ರಸೂನ್ ಜೋಷಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಜಸ್ಥಾನ ಡಿಜಿಪಿ ಅವರಿಗೂ ಪತ್ರ ರವಾನೆ ಮಾಡಿದ್ದಾರೆ. ಅಂತೆಯೇ ಪತ್ರದಲ್ಲಿ ಯಾವುದೇ ಕಾರಣಕ್ಕೂ ಚಿತ್ರಕ್ಕೆ ಪ್ರಮಾಣ ಪತ್ರ ನೀಡದಂತೆ ಮನವಿ ಮಾಡಲಾಗಿತ್ತು. 


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್