ಮನೋರಂಜನೆ

2 months ago news image
ಕಂಪ್ಲೀಟ್ ಹೊಸಬರ ತಂಡದ ಸಿನಿಮಾ ‘ಎಸ್ಕೇಪ್’ ಚಿತ್ರದಲ್ಲಿದ್ದಾರೆ ದೀಪಮ್, ಪ್ರಗ್ಯಾ, ಶೀತಲ್ ಶೆಟ್ಟಿ
ಸುದ್ದಿಗಳು/ ಮನೋರಂಜನೆ 0

ಇತ್ತಿಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ಗೆ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಚಿತ್ರಗಳು ಬರ್ತಾನೇ ಇವೆ.. ಅದರಲ್ಲಿ ಕೆಲವು ಸಕ್ಸ್‌ಸ್ ಕಂಡ್ರೆ, ಇನ್ನೂ ಕೆಲವು ಚಿತ್ರಗಳು ಬಂದ ದಾರಿಗೆ ಸುಂಕವಿಲ್ಲವೆನ್ನುವ ಹಾಗೆ ವಾಪಸ್ ಹೋಗಿಬಿಡುತ್ತವೇ.. ಆದ್ರೆ ಇಲ್ಲೊಂದು ಡಿಫರೆಂಟ್ ಟೈಟಲ್‌ನೊಂದಿಗೆ ಚಿತ್ರವೊಂದು ಸದ್ಯ ಚಿತ್ರದ ಟ್ರೇಲರ್‌ನಿಂದ ಸೌಂಡ್ ಮಾಡ್ತಿದೆ.. ಯಾವ್ದು ಆ ಚಿತ್ರ, ಏನು ಆ ಚಿತ್ರದ ವಿಶೇಷತೆ, ಎಂಬುದನ್ನ ನೋಡೋಣ ಈ ಸ್ಟೋರಿಯಲ್ಲಿ..

ಎಸ್..ಇತ್ತಿಚಿನ ದಿನಗಳಲ್ಲಿ ಹೊಸಬರ ಚಿತ್ರಗಳು ತುಂಬಾ ಸದ್ದು ಮಾಡ್ತಿವೆ, ಅದಕ್ಕೆ ಕಾರಣ ಚಿತ್ರದಲ್ಲಿನ ಒಳ್ಳೆಯ ಕತೆ.. ಒಂದೊಳ್ಳೆ ಚಿತ್ರವನ್ನು ಮಾಡಿದ್ರೆ, ಚಿತ್ರದ ಕಥೆ ಚನ್ನಾಗಿದ್ರೆ, ಪ್ರೇಕ್ಷಕರು ಖಂಡಿತಾ ಚಿತ್ರವನ್ನು ಮೆಚ್ಚಿಕೊಳ್ತಾರೆ ಎನ್ನುವ ನಂಬಿಕೆಯಲ್ಲಿ, ಹೊಸಬರ ಚಿತ್ರತಂಡ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ರೆಡಿಯಾಗಿದೆ ಆ ಚಿತ್ರದ ಹೆಸರೇ ‘ಎಸ್ಕೇಫ್’..

ಇದೊಂದು ಸಸ್ಪೆನ್ಸ್, ಹಾರರ್ ಚಿತ್ರವಾಗಿದ್ದು ಈ ಚಿತ್ರದ ಮೂಲಕ ದೀಪಮ್ ಎಂಬ ನವ ನಟ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗ್ತಿದಾರೆ.. ಇದಕ್ಕೂ ಮೊದಲು ದೀಪಮ್ ತಾನು ಒಬ್ಬ ಒಳ್ಳೆ ನಟನಾಗಬೇಕೆಂದುಕೊಂಡು. ಅದಕ್ಕಾಗಿ ನ್ಯೂಯಾರ್ಕನಲ್ಲಿ ಒಂದು ವರ್ಷದ ನಟನಾ ತರಬೇತಿಯನ್ನು ಮುಗಿಸಿಕೊಂಡು ಬಂದಿದ್ದಾರೆ.. ದೀಪಮ್‌ಗೆ ನಾಯಕಿಯಾಗಿ ಪ್ರಗ್ಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಹೊಂದಿರುವ ದರ್ಶನ್, ಒಂದು ಒಳ್ಳೆಯ ಚಿತ್ರವನ್ನು ಮಾಡುವ ಕನಸಿನೊಂದಿಗೆ ಕಥೆ-ಚಿತ್ರಕಥೆ ಬರೆದು ಇದೆ ಮೊದಲ ಬಾರಿಗೆ ‘ಎಸ್ಕೆಫ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಇಲ್ಲಿ ಚಿತ್ರದಲ್ಲಿ ಒಂದು ವಸ್ತು ಎಸ್ಕೇಫ್ ಆಗುತ್ತದೆ, ಆ ವಸ್ತುವಿನ ಮೂಲಕವೆ ಸಂಪೂರ್ಣ ಚಿತ್ರ ಸಾಗುತ್ತದೆ ಎಂಬುದು ಚಿತ್ರದ ಸಾರಾಂಶ..

ಇನ್ನು ನಿರ್ಮಾಪಕರ ಹೆಸರು ಕೂಡಾ ದರ್ಶನ್, ಈ ಮೊದಲು ಮಂಡ್ಯ ಟು ಮುಂಬೈ, ಸಿಂಪಲ್ಲಾಗಿ ಇನ್ನೋಂದು ಲವ್ ಸ್ಟೋರಿ, ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ದರ್ಶನ್, ಈ ಎಸ್ಕೇಫ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ.. ಅಂದ್ಹಾಗೆ ಈ ಚಿತ್ರದಲ್ಲಿ ೦೩ ಹಾಡುಗಳಿದ್ದು, ಸಾಯಿ ಕಿರಣ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ..

ಸದ್ಯ ಚಿತ್ರದ ಟ್ರೇಲರ್‌ನಿಂದ ಸೌಂಡ್ ಮಾಡ್ತಿರೋ ಎಸ್ಕೇಪ್ ಸಿನಿಮಾವನ್ನು ಮೈಸೂರು, ಮಂಗಳೂರು, ನ್ಯೂಯಾರ್ಕ, ಮನಾಲಿ, ದೆಹಲಿ, ಯಂತಹ ಸುಂದರ ತಾಣಗಳಲ್ಲಿ  ಚಿತ್ರೀಕರಣವನ್ನು ಮಾಡಿದೆ ಚಿತ್ರತಂಡ....

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್