ಮನೋರಂಜನೆ

2 months ago news image
ಪ್ರಿಯಾಂಕ ಚೋಪ್ರಾ ಸಿನಿಬದುಕಿನ ಆರಂಭದ ದಿನಗಳು ಹೇಗಿತ್ತು ಗೊತ್ತಾ..?
ಸುದ್ದಿಗಳು/ ಮನೋರಂಜನೆ 0

ನಟಿ ಪ್ರಿಯಾಂಕ ಚೋಪ್ಪಾ ಪಿಗ್ಗಿ ಎಂದೇ ಖ್ಯಾತಿಯಾಗಿದ್ದಾರೆ. ಬಾಲಿವುಡ್ ಮಾತ್ರವಲ್ಲ,ಹಾಲಿವುಡ್ ನಲ್ಲೂ ಫೇಮಸ್ ಆಗಿರುವ ಪಿಗ್ಗಿ ಇದೀಗ ಚಿತ್ರರಂಗಕ್ಕೆ ಬಂದ ಆರಂಭದಲ್ಲಿನ ಆಕೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದೀಗ ಯಶಸ್ಸಿನ ಉತ್ತುಂಗದಲ್ಲಿರುವ ಪ್ರಿಯಾಂಕ ಚೋಪ್ರಾ ಭುವನ ಸುಂದರಿಯಾಗಿ ಸಿನಿರಂಗ ಪ್ರವೇಶಿಸಿದ್ದರು. ಹೀಗೆ ಸಿನಿಮಾಬದುಕು ಆರಂಭಿಸಿದ ಚೊಪ್ರಾರ ಆರಂಭದ ದಿನಗಳು ಕಷ್ಟಕರವಾಗಿತ್ತಂತೆ.

ನಾನೇನೂ ಹೂವಿನ ಹಾಸಿನಲ್ಲಿ ಸಿನಿರಂಗಕ್ಕೆ ಬಂದಿಲ್ಲ. ನನಗೆ ಆರಂಭದ ದಿನಗಳು ಕಠಿಣವಾಗಿದ್ದವು. ವಿಪರ್ಯಾಸವೆಂದರೆ ಪ್ರಿಯಾಂಕಗೆ ಆರಂಭದ ದಿನಗಳಲ್ಲಿ  10 ಚಿತ್ರಗಳು ಕೈ ತಪ್ಪಿಹೊಗಿದ್ದವಂತೆ. ಈಕುರಿತಂತೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಆಕೆಯ ತಾಯಿ, ಈ ಬಗ್ಗೆ ಬಹಿರಂಗಡಿಸಿದ್ದಾರೆ. ಪ್ರಿಯಾಂಕ ನಿರ್ದೇಶಕರು, ನಿರ್ಮಾಪಕರು ಹೇಳಿದ ಹಾಗೆ  ಕೇಳದೆ ಇದ್ದಿದ್ದರಿಂದ 10 ಚಿತ್ರಗಳು ಆಕೆಯ ಕೈತಪ್ಪಿ ಹೋಗಿದ್ದವು. ಅವರು ಬೇಕು ಎಂದೆ ತುಂಡು ಬಟ್ಟೆಗಳನ್ನು ಹಾಕಲು ಹೇಳುತ್ತಿದ್ದರು. ಇದಕ್ಕೆ ಪ್ರಿಯಾಂಕ  ವಿರೋಧ ವ್ಯಕ್ತಪಡಿಸುತ್ತಿದ್ದೆ ಆಕೆಗೆ ಅವಕಾಶ ತಪ್ಪಿಹೋಗಲು ಕಾರಣವಂತೆ.

ಸದ್ಯಕ್ಕೆ ಪ್ರಿಯಾಂಕ ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲೂ ಬಹುಬೇಡಿಕೆಯ ನಟಿಯಾಗಿದ್ದಾರೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್