ಮನೋರಂಜನೆ

2 months ago news image
‘ಮತ್ತೆ ಬಾ ಉಪೇಂದ್ರ’ ಚಿತ್ರದ ಆಡಿಯೋ ರಿಲೀಸ್
ಸುದ್ದಿಗಳು/ ಮನೋರಂಜನೆ 0

ರಿಯಲ್ ಸೂಪರ್‌ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರೇಮ ಆಫ್ಟರ್ ಲಾಂಗ್ ಗ್ಯಾಫ್‌ನ ನಂತರ ಅಭಿನಸಿದ ಸಿನಿಮಾ ಉಪೇಂದ್ರ ಮತ್ತೆ ಬಾ.. ಸದ್ಯ ಪ್ರಜಾಕೀಯದಲ್ಲಿ ಬ್ಯುಸಿಯಾಗಿರೋ ನಟ ನಿನ್ನೆಯಷ್ಟೇ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿದ್ರು.. ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ ಯಾರೆಲ್ಲಾ ಇದಾರೆ..? ಚಿತ್ರದಲ್ಲಿ ಎಷ್ಟು ಸಾಂಗ್ಸ್ ಇವೆ ಅಂತಾ ಹೇಳ್ತೀವಿ ಈ ಸ್ಟೋರಿಲಿ..

ಉಪೇಂದ್ರ ಮತ್ತೆ ಬಾ.. ಸದ್ಯ ಚಿತ್ರದ ಆಡಿಯೋವನ್ನು ರಿಲೀಸ್ ಮಾಡಿದೆ ಚಿತ್ರತಂಡ.. ಉಪೇಂದ್ರ ಮತ್ತೆ ಬಾ.. ಟೈಟಲ್‌ಗೆ ಇಂತಿ ನಿನ್ನ ಪ್ರೇಮ ಅನ್ನೋ ಟ್ಯಾಗ್‌ಲೈನ್ ಇದಕ್ಕೆ ಆಫ್ಟ್ ಆಗಿದೆ.. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋದು ಅರುಣ್ ಲೋಕನಾಥ್.. ೨೦೦೨ರಲ್ಲಿ ಬಿಡುಗಡೆಯಾದ ಎಚ್‌ಟುಓ ಸಿನಿಮಾಗೆ ಆಕ್ಷನ್‌ಕಟ್ ಹೇಳಿದ್ದ ಅರುಣ್ ಲೋಕನಾಥ್ ಸುಮಾರು ೧೫ವರ್ಷಗಳ ನಂತರ ಉಪ್ಪಿಗೆ ಮತ್ತೆ ನಿರ್ದೇಶನ ಮಾಡಿದ್ದಾರೆ.. 

ಇನ್ನು ಈ ಚಿತ್ರದಲ್ಲಿ ರಿಯಲ್‌ಸ್ಟಾರ್ ಉಪ್ಪಿ ಟು ಶೇಡ್ಸ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಐವರು ನಾಯಕಿಯರು ತೆರೆಹಂಚಿಕೊಂಡಿರೋದು ಸ್ಪೆಷಲ್ ಅಂತಾನೇ ಹೇಳ್ಬಹುದು.. ಉಪೇಂದ್ರ ಸಿನಿಮಾದಲ್ಲಿ ಮೂವರು ನಾಯಕಿಯರು ಕಾಣಿಸಿಕೊಂಡು ದೊಡ್ಡ ಹಿಟ್ ಆಗಿತ್ತು.. ಆದ್ರೀಗ ಮತ್ತೆ ಅವ್ರ ಸಿನಿಮಾದಲ್ಲಿ ಐವರು ನಾಯಕಿಯರು ಇರೋದು ಒಂದು ರಿತೀಯ ಚಿತ್ರಕ್ಕೆ ಪಾಸಿಟಿವ್ ಎನರ್ಜಿಯನ್ನ ತುಂಬಿದಂತಾಗಿದೆ.. ಮುಖ್ಯಭೂಮಿಕೆಯಲ್ಲಿ ಪ್ರೇಮ, ಶೃತಿ ಹರಿಹರನ್, ದೀಪ್ತಿ ಕಾಪ್ಸೆ, ಶೃತಿ ನಂದೀಶ್, ಹರ್ಷಿಕಾ ಪೂಣಚ್ಚ ತೆರೆಹಂಚಿಕೊಂಡಿದ್ದಾರೆ..

ಇನ್ನು ಈ ಚಿತ್ರದಲ್ಲಿ ಹರ್ಷಿಕಾ, ದೀಪ್ತಿ, ಶೃತಿ ನಂದೀಶ್ ಈ ಮೂವರು ಉಪೇಂದ್ರ ಅತ್ತೆ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಬ್ಬೋಬ್ಬರು ಒಂದೊಂದು ವಿಭಿನ್ನ ಪಾತ್ರದಲ್ಲಿ ಅಭಿನಯಿಸೋದ್ರ ಮೂಲಕ ಉಪೇಂದ್ರ ಅವ್ರಿಗೆ ಕ್ವಾಟ್ಲೆ ನೀಡ್ತಾರಂತೆ.. 

ಇನ್ನು ಈ ಚಿತ್ರದಲ್ಲಿ ನಾಲ್ಕು ಕಲರ್‌ಫುಲ್ ಸಾಂಗ್ಸ್ ಇದ್ದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ಧಾರೆ ಶ್ರೀಧರ್ ವಿ ಸಂಭ್ರಮ್.. ಅಷ್ಟೇ ಅಲ್ದೆ ಇದು ಇವ್ರ ಸಂಗೀತ ನಿರ್ದೇಶನದ ೨೫ನೇ ಸಿನಿಮಾ ಅನ್ನೋದು ಕೂಡಾ ಅಷ್ಟೇ ಸ್ಪೆಷಲ್.. ನಾಲ್ಕು ಸಾಂಗ್ಸ್ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿಬಂದಿದ್ದು, ಆನಂದ್ ಆಡಿಯೋ ಕಂಪನಿಯ ಮೂಲಕ ಬಿಡುಗಡೆಯಾಗಿವೆ..

ಸಿನಿಮಾ ಹಯಗ್ರೀವ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ನಿರ್ಮಾಣವಾಗಿದ್ದು, ಚಿತ್ರಕ್ಕೆ ಮೂವರು ಬಂಡವಾಳ ಹೂಡಿ ನಿರ್ಮಾಣ ಮಾಡಿದ್ಧಾರೆ.. ಒಟ್ನಲ್ಲಿ ಸದ್ಯ ಚಿತ್ರದ ಆಡಿಯೋವನ್ನು ರಿಲೀಸ್ ಮಾಡಿರೋ ಚಿತ್ರತಂಡ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರವನ್ನು ತೆರೆಗೆ ತರೋ ಪ್ಲಾನ್ ಮಾಡ್ತಿದೆ ಚಿತ್ರತಂಡ.. ತೆರೆಗೆ ಸಜ್ಜಾದ ಸಿನಿಮಾದಲ್ಲಿ ಏನೇಲ್ಲಾ ಸ್ಪೆಷಲ್ ಎಲಿಮೆಂಟ್ ಇರ್ತಾವೆ ಅಂತಾ ಕಾದು ನೋಡ್ಬೇಕು..

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್