ಮನೋರಂಜನೆ

4 months ago news image
25 ಕೋಟಿ ವೆಚ್ಚದಲ್ಲಿ ಸಾಹಸ ದೃಶ್ಯ..!
ಸುದ್ದಿಗಳು/ ಮನೋರಂಜನೆ 0

ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿರುವ ಸಾಹೋ, ಸಿನಿಮಾದ ಕುರಿತು ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಈಗ ಈ ಚಿತ್ರದ ಸಾಹಸ ದೃಶ್ಯಕ್ಕಾಗಿ ಸುಮಾರು 25 ಕೋಟಿ ಖರ್ಚು ಮಾಡಲಾಗುತ್ತಿದೆಯಂತೆ ಎಂದು ತಿಳಿದು ಬಂದಿದೆ. 

ಹೌದು, ಬಾಹುಬಲಿ ಪ್ರಭಾಸ್ ನಟಿಸುತ್ತಿರುವ ಸಾಹೋ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣಕ್ಕೆ ಸುಮಾರು 25 ಕೋಟಿ ಖರ್ಚು ಮಾಡಲಾಗುತ್ತಿದೆ.  ಹಾಲಿವುಡ್ ಸಾಹಸ ನಿರ್ದೇಶಕರಿಂದ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಹಾಲಿವುಡ್ ಫೈಟ್ ಮಾಸ್ಟರ್ ಕೆನ್ನಿ ಬೇಟ್ಸ್ ಅವರಿಂದ 25 ಕೋಟಿ ವೆಚ್ಚದಲ್ಲಿ ಸಾಹಸ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. 

ಸಾಹೀ ಸಿನಿಮಾವನ್ನು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಪ್ರಭಾಸ್ ಗೆ ಜೋಡಿಯಾಗಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ. ಈ  ಸಿನಿಮಾವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲಿಯೇ ಈ ಚಿತ್ರ ತೆರೆಗೆ ಬರುವ ನೀರೀಕ್ಷೆಗಳಿವೆ. 


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್