ಮನೋರಂಜನೆ

4 months ago news image
ಇದು ಹರಿಪ್ರಿಯಾರ ' ಸೂಜಿ' ಯ ಕಥೆ...
ಸುದ್ದಿಗಳು/ ಮನೋರಂಜನೆ 0

ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಹರಿಪ್ರಿಯಾ ಕೂಡಾ ಒಬ್ಬರು. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿರುವ ಇವರು ಇತ್ತೀಚೆಗೆ ' ಲೈಫ್​ ಜೊತೆ ಒಂದು ಸೆಲ್ಫಿ'  ಚಿತ್ರಕ್ಕೂ ಆಯ್ಕೆಯಾಗಿದ್ದರು. ಇದೀಗ ಮತ್ತೊಂದು ಚಿತ್ರ ಅನೌನ್ಸ್​ ಆಗಿದೆ. ಅದುವೇ  'ಸೂಜಿದಾರ' . ರಂಗಕರ್ಮಿ ಮೌನೇಶ್​ ಬಡಿಗೇರ್​ ಈ ಚಿತ್ರದ ನಿರ್ದೇಶಕರು. ಖ್ಯಾತ ರಂಗಕರ್ಮಿಯಾಗಿರುವ ಇವರು ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಚಿತ್ರರಂಗದಲ್ಲಿ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. 

ಮಹಾಕಾವ್ಯ ನಾಟಕ ಕುರುಕ್ಷೇತ್ರದಲ್ಲಿ ಅಭಿನಯಿಸುತ್ತಿರುವ ಹರಿಪ್ರಿಯ ಸಂಹಾರ, ಕನಕ ಮತ್ತು ಕಥಾ ಸಂಗಮ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಏಕಕಾಲಕ್ಕೆ ಹಲವು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಹರಿಪ್ರಿಯ ಅವರ ಸೂಜಿದಾರ ಚಿತ್ರದ ಫಸ್ಟ್ ಲುಕ್ ಸಹ ಇತ್ತೀಚೆಗೆ 

ಬಿಡುಗಡೆಯಾಗಿತ್ತು. ಸೂಜಿದಾರ ಚಿತ್ರದ ಚಿತ್ರೀಕರಣ ಸಹ ಆರಂಭಗೊಂಡಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಗ್ಲಾಮರಸ್ ಆಗಿ ಕಾಣುವುದರ ಜತೆಗೆ ಗೃಹಿಣಿ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಜೊತೆಗೆ ಯಶವಂತ್ ಶೆಟ್ಟಿ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್, ಚೈತ್ರ, ಹರೀಶ್ ಸಮಷ್ಠಿ, ನಾಗರಾಜ್ ಪತ್ತಾರ್ ಮುಂತಾದವರು ನಟಿಸುತ್ತಿದ್ದಾರೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್