ಮನೋರಂಜನೆ

4 months ago news image
'ಪಿಗ್ಗಿ ಇನ್ನು ಯೋಗ ಟೀಚರ್..!
ಸುದ್ದಿಗಳು/ ಮನೋರಂಜನೆ 0

ಖ್ಯಾತ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ   'ಬೇವಾಚ್​ 'ಸಿನಿಮಾದ ಮೂಲಕ ಹಾಲಿವುಡ್​ಗೆ ಎಂಟ್ರಿ ಕೊಟ್ಟ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದುವೇ 

Isn’t it Romantic ಎಂಬ ಚಿತ್ರದಲ್ಲಿ. ಇದರಲ್ಲಿ  ಪಿಗ್ಗಿ, ಯೋಗ ಟೀಚರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಪಿಗ್ಗಿ 6 ಪ್ಯಾಕ್​ ಮಾಡಿಕೊಳ್ಳಲು ಸಾಕಷ್ಟು ಹಾರ್ಡ್​ ವರ್ಕ್​ ಮಾಡುತ್ತಿದ್ದಾರೆ. ಜೊತೆಗೆ ಆಹಾರ, ಮತ್ತು ಜಿಮ್​ನಲ್ಲಿ ಪರಿಶ್ರಮ ಪಡುತ್ತಿದ್ದಾರೆ. 2000ದಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಂತರ ಚೋಪ್ರಾ ನಟಿಯಾಗಿ ಬಡ್ತಿಹೊಂದಿದರು. 2002ರಲ್ಲಿ ತಮಿಳು ಚಲನಚಿತ್ರ 

ತಮಿಳನ್ ನಲ್ಲಿ ವಿಜಯ್ ಜೊತೆ ನಟಿಸುವುದರೊಂದಿಗೆ ಚಲನಚಿತ್ರರಂಗ ಪ್ರವೇಶಿಸಿದಳು. ಇದರಲ್ಲಿ ಚೋಪ್ರಾ ಒಂದು ಹಾಡನ್ನೂ ಹಾಡಿದ್ದಾರೆ. ಆ ನಂತರ ಬಾಲಿವುಡ್ ಗೆ ಹೋದರು. 2003ರಲ್ಲಿ ಬಿಡುಗಡೆಯಾದ ಆಕೆಯ ಮೊದಲ ಬಾಲಿವುಡ್ ಚಲನಚಿತ್ರವೇ ' ದಿ ಹೀರೋ : ಲವ್ ಸ್ಟೋರಿ ಆಫ್ ಎ ಸ್ಪೈ'. ಈ ಚಿತ್ರ ಪ್ರಿಯಾಂಕಾ ಚೋಪ್ರಾಗೆ ಉತ್ತಮ ಹೆಸರು ತಂದುಕೊಟ್ಟಿತು.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್