ಮನೋರಂಜನೆ

4 months ago news image
ಹಿರಿಯ ನಟನ ಅಳಿಯನ ಮನೆಯಲ್ಲಿ ದರೋಡೆ..!
ಸುದ್ದಿಗಳು/ ಮನೋರಂಜನೆ 0

ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ - ಉದ್ಯಮಿ ಕೆ‌.ಸಿ.ವಿರೇಂದ್ರ ಅಲಿಯಾಸ್ ಪಪ್ಪಿ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿ, ಸುಮಾರು 6 ಕೋಟಿ ಮೌಲ್ಯದಷ್ಟು ದರೋಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಚಳ್ಳಕೆರೆ ಪಟ್ಟಣದ ಹಳೇಟೌನ್ ನ ವಿರೇಂದ್ರ ಅವರ ಮನೆಯಲ್ಲಿ ನಡೆದಿರುತ್ತದೆ. 

ಕಳ್ಳರು ಯಾರೂ ಇಲ್ಲದ್ದನ್ನು ಗಮನಿಸಿ ಕಬಾರ್ಡ್ ಮುರಿದು ದರೋಡೆ ನಡೆಸಿದ್ದಾರೆ. ಸುಮಾರು 30 ಲಕ್ಷ ಮೌಲ್ಯದ ತಲಾ 1 ಕೆಜಿ ತೂಕದ ಒಟ್ಟು 21 ಚಿನ್ನದ ಗಟ್ಟಿಗಳನ್ನು ದರೋಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಪೋಲಿಸರು ಭೇಟಿ ನೀಡಿ ಪರಿಶಿಲನೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ. 

ಈ ಹಿಂದೆ ಐಟಿ ದಾಳಿ ಮಾಡಿದಾಗ 6 ಕೋಟಿ ಹಣ ಪತ್ತೆ ಆಗಿತ್ತು. ಅಲ್ಲದೇ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಮನೆಯಲ್ಲಿ ಸಹ  ಕಳ್ಳತನ ಮಾಡಲಾಗಿದ್ದು, 10.70 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ. ಈಗ ಈ ಎರಡು ಕಳ್ಳತನದ ಕುರಿತು ಚಳ್ಳಕೆರೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು




ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್