ಮನೋರಂಜನೆ

4 months ago news image
ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದ್ದಾರೆ ದರ್ಶನ್, ಸುದೀಪ್
ಸುದ್ದಿಗಳು/ ಮನೋರಂಜನೆ 0

ಗಾಂಧಿನಗರದಲ್ಲಿ ಇವತ್ತು ಏನು ಸುದ್ದಿ ಇಲ್ಲಪ್ಪ ಎನ್ನುವ ದಿನವೇ ಇಲ್ಲಾ ಕಣ್ರೀ .. ಏನಾದ್ರೂ ಒಂದು ಸುದ್ದಿ ಇರೋದು ಪಕ್ಕಾ ಆದ್ರೂ. ಚಾಲೇಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಸುದ್ದಿ ಮಾತ್ರ ಪ್ರತೀ ದಿನ ಏನಾದ್ರು ವಿಷಯದಲ್ಲಿ ಸದ್ದು ಮಾಡ್ತಾನೆ ಇರುತ್ತೆ. ಇವತ್ತು ಏನಪ್ಪಾ ದಚ್ಚು ಮತ್ತು ಕಿಚ್ಚನ ಸುದ್ದಿ ಅಂತಿರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗತ್ತೆ..

ಎಸ್ .. ಸ್ಯಾಂಡಲ್‌ವುಡ್‌ನಲ್ಲಿ ಸದಾ ಸುದ್ದಿಯಲ್ಲಿರೋ ನಟರೆಂದ್ರೆ ಅದು ಚಾಲೇಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಅಂತಾ ಹೇಳಿದ್ರೆ ತಪ್ಪಾಗಲ್ಲಾ. ತಮ್ಮ ಚಿತ್ರದ ವಿಷಯವಾಗಲಿ, ಅಭಿಮಾನಿಗಳ ಜೊತೆ ತಮ್ಮ ಒಡನಾಟದಿಂದಾಗಲಿ, ಇನ್ನೋಂದು ಮತ್ತೋಂದು ಎನ್ನುತ್ತ ಸದಾ ಒಂದಿಲ್ಲೋಂದು ಸುದ್ದಿಯಲ್ಲಿರುವ ನಟರು ಈ ದಚ್ಚು ಮತ್ತು ಕಿಚ್ಚ..

ಇವಾಗಾ ಯಾಕೆ ಈ ವಿಷಯದ ಬಗ್ಗೆ ಮಾತಾಡ್ತಿದಿವಿ ಅಂತಾ ಯೋಚನೆ ಮಾಡ್ತಿದಿರಾ ಅಲ್ವಾ? ನೀವು ಯೋಚಿಸ್ತಿರೋದು ನಿಜಾನೆ. ಸದ್ಯ ಯೂಟ್ಯೂಬ್ ನಲ್ಲಿ ಸುದ್ದಿಯಾಗಿದ್ದಾರೆ ದಚ್ಚು ಮತ್ತು ಕಿಚ್ಚ , ಹೌದು ಮೊನ್ನೆಯಷ್ಟೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ರಾಜು ಕನ್ನಡ ಮೀಡಿಯಂ ಚಿತ್ರತಂಡ ಸುದೀಪ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಟ್ರೇಲರ್ ಒಂದನ್ನ ಬಿಡುಗಡೆ ಮಾಡಿತು, ಈ ಟ್ರೇಲರ್ ಎಷ್ಟು ಜನರನ್ನ ಆಕರ್ಷಿಸಿದೆ ಎಂದರೆ, ಟೀಸರ್ ಬಿಡುಗಡೆಯಾದ ಎಂಟು ದಿನದಲ್ಲಿ ಒಂದು ಮಿಲಿಯನ್ ಜನರಿಂದ ನೋಡಲ್ಪಟ್ಟಿದೆ..

ಈ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಕಿಚ್ಚ ಸುದೀಪ್ ಶ್ರೀಮಂತ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದು, ಟೀಸರ್ ನೋಡಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ ಜೊತೆಗೆ ಒಂದು ಮಿಲಿಯನ್ ಜನರಿಂದ ಈ ಟ್ರೆಲರ್ ನೋಡಲ್ಪಟ್ಟಿದ್ದರಿಂದ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಟ್ರೇಲರ್ ಸಾಲಿಗೆ ಇದೂ ಕೂಡಾ ಸೇರ್ಪಡೆಯಾಗಿ ಮೊದಲ ಸ್ಥಾನದಲ್ಲಿದೆ ಅಂತಾ ಹೇಳ್ಬಹುದು.

ಇನ್ನೂ ತಾರಕ್‌ನಾಗಿ ಕಾಣಿಸಿಕೊಳ್ಳಲಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ಟೀಸರ್ ಬಿಡುಗಡೆಯಾದ ಮೇಲಂತೂ ತಾರಕಕ್ಕೇರಿದೆ ಅಂತಾ ಹೇಳ್ಬಹುದು. ಯಾಕಂದ್ರೆ ತಾರಕ್ ಚಿತ್ರದ ಟ್ರೇಲರ್ ಬಿಡುಗಡೆಗೊಂಡು ಕೇವಲ ಮೂರು ದಿನದಲ್ಲಿ ಬರೋಬ್ಬರಿ ಆರು ಲಕ್ಷಕ್ಕೂ ಅಧಿಕ ಜನರಿಂದ ನೋಡಲ್ಪಟ್ಟಿದೆ. ಇನ್ನೂ ನೋಡುಗರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ಚಿತ್ರದಲ್ಲಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ರಗ್ಬೀ ಪ್ಲೇಯರ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಿನಿ ಅಭಿಮಾನಿಗಳನ್ನ ಸೆಳೆಯುತತಿದ್ದಾರೆ,ಹಾಗಾಗಿ ಚಾಲೇಂಜಿಂಗ್ ಸ್ಟಾರ್ ದರ್ಶನ್‌ರ ತಾರಕ್ ಟ್ರೇಲರ್ ಯೂಟ್ಯೂಬ್‌ನಲ್ಲಿ ಎರಡನೇ ಸ್ಥಾನದಲ್ಲಿದೆ ಅಂತಾ ಹೇಳ್ಬಹುದು. ಜೊತೆಗೆ ಇದೇ ತಿಂಗಳ ಈ ತಾರಕ್ ಚಿತ್ರ ಬಿಡುಗಡೆಯೂ ಆಗ್ತಿದೆ,

ಯಾವ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಏನ್ ಸದ್ದು ಮಾಡುತ್ತೋ ಗೊತ್ತಿಲ್ಲಾ ಆದ್ರೆ ದಚ್ಚು ಮತ್ತು ಕಿಚ್ಚನ ಚಿತ್ರದ ಟ್ರೇಲರ್ ಅಥವಾ ಸಾಂಗ್ಸ್ ರಿಲೀಸ್ ಆದ್ರೆ ಅಂಕೆ ಸಂಖ್ಯೆಗಳ ಲೆಕ್ಕ ಮಾತ್ರ ಶುರುವಾಗುತ್ತೆ. ಇದರಿಂದಲೇ ಗೊತ್ತಾಗತ್ತೆ ಚಾಲೇಂಜಿಮಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಎಷ್ಟೋಂದು ಪ್ರೀತಿಸುತ್ತಾರೆ ಅಂತಾ.


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್