ಮನೋರಂಜನೆ

1 week ago
ಭೂಮಿಪುತ್ರ' ಸಿನೆಮಾ ಶೂಟಿಂಗ್ ತಡವಾಗುವುದಕ್ಕೆ ಕಾರಣ ಏನು..?
ಸುದ್ದಿಗಳು/ ಮನೋರಂಜನೆ 0

ನಿಮಗೆ ಗೊತ್ತಿರಬಹುದು. ಮಾಜಿ ಸಿಎಂ  ಹೆಚ್.ಡಿ. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದಾಗಿನ ಕತೆ ಹೊಂದಿರುವ ‘ಭೂಮಿಪುತ್ರ’ ಎಂಬ ಸಿನಿಮಾ ಬರುತ್ತೆ ಎಂಬುದು ಭಾರೀ ಸುದ್ದಿ ಮಾಡಿತ್ತು. ಅದ್ದೂರಿಯಾಗಿ ಚಿತ್ರದ ಮುಹೂರ್ತ ಕೂಡಾ ನಡೆಯಿತು‌. ಆದರೆ ಇನ್ನೂ ಶೂಟಿಂಗ್ ಶುರುವಾಗಿಲ್ಲ. ಈ ಚಿತ್ರವನ್ನ ಎಸ್.ನಾರಾಯಣ್ ನಿರ್ದೇಶಿಸಬೇಕಿತ್ತು. ಆದರೆ ಎಲ್ಲಾ ಉಲ್ಟಾ ಆಗುತ್ತಿದೆ. 

 ಈ ಕುರಿತು ಚಿತ್ರದ ನಿರ್ಮಾಪಕ ಪ್ರಭು ಕುಮಾರ್  ಹೇಳುವುದು ಹೀಗೆ - ' ಕುಮಾರಸ್ವಾಮಿಯವರು ಇನ್ನೂ ಎಸ್.ನಾರಾಯಣ್ ಅವರ ಕಥೆಯನ್ನು ಓಕೆ ಮಾಡಿಲ್ಲ. ಕಥೆ ಇಷ್ಟಪಟ್ಟು ಅವರು ಓಕೆ ಮಾಡದೇ ನಾವು ಚಿತ್ರೀಕರಣ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಕುಮಾರಸ್ವಾಮಿಯವರು ಕಥೆ ಓದಿದ್ದಾರೋ..? ಇಲ್ಲವೋ..? ಎಂಬುದು ಇನ್ನೂ ಸ್ಪಷ್ಟತೆ ಇಲ್ಲ. ಅಥವಾ ಚಿತ್ರದಲ್ಲಿನ ಕೆಲವು ಅಂಶಗಳಿಗೆ ಕತ್ತರಿ ಹಾಕಬೇಕಿದ್ಯಾ..? ಎಂಬುದು ಮೂಲ ಪ್ರಶ್ನೆ.


Related Articles