ಮನೋರಂಜನೆ

7 months ago news image
ತಮಿಳುನಾಡಲ್ಲಿ ರಜನಿ ಪಕ್ಷ; ಇತ್ತ ಕನ್ನಡನಾಡಲ್ಲಿ ಉಪೇಂದ್ರ ಪಕ್ಷ: ಇದರ ಹಿಂದಿನ ಮರ್ಮ ಏನು?
ಸುದ್ದಿಗಳು/ ಮನೋರಂಜನೆ 0

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರುತ್ತಾರಾ ? ರಾಜಕೀಯದಿಂದ ದೂರ ಆಗ್ತಾರಾ? ಇಂಥದ್ದೊಂದು ಪ್ರಶ್ನೆ ಕನ್ನಡ ಚಿತ್ರರಂಗದಲ್ಲಿ ಹರಿದಾಡುತ್ತಿದೆ. 

ವಿದ್ಯಾರ್ಥಿ ದೆಸೆಯಿಂದಲೂ ನಟ ಉಪೇಂದ್ರ ಅವರು ಆರೆಸ್ಸೆಸ್ ಗೆ ಸಮೀಪವಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಅವರ ಚಿಂತನೆಗಳು ಕೂಡಾ ಬೀಜೇಪಿಗೆ ಸಮೀಪವಿತ್ತು. ಆದರೆ ಇದೀಗ ಅವರು ರಾಜಕೀಯ ವ್ಯವಸ್ಥೆ ವಿರುದ್ಧ ಸಿಡಿದೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕಿರುವ ಪೋಸ್ಟ್ ಇಡೀ ರಾಜಕೀಯ ವ್ಯವಸ್ಥೆ ವಿರುದ್ಧ ಯುವಜನರನ್ನೂ ಸಿಡಿದೆಬ್ಬಿಸುವಂತಿದೆ. 

ಅವರ ಆಪ್ತ ವಲಯ ಹೇಳುವಂತೆ ನಟ ಉಪೇಂದ್ರ ಅವರು ಕನ್ನಡ ನಾಡಿನಲ್ಲೊಂದು ಪ್ರತ್ಯೇಕ ಪಕ್ಷವನ್ನು ಕಟ್ಟುತ್ತಾರಂತೆ. 

ನಮ್ಮ ದುಡಿಮೆಯ ಹಣದಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಬದುಕುತ್ತಿದ್ದಾರೆ. ಆದರೆ ಜನಪರವಾಗಿ ಅವರು ಇರಲ್ಲ ಎಂದಿರುವ ಅವರು ವ್ಯವಸ್ಥೆಯ ವಿರುದ್ಧ ಹೊರಡುವ ಸುಳಿವು ನೀಡಿದ್ದಾರೆ. 

ರಾಜಕೀಯ ಬದಲಾಗಿ ಪ್ರಜಾಕೀಯ ಜಾರಿಗೆ ತರಬೇಕಿದೆ. ದುಡ್ಡು ಖರ್ಚಿಲ್ಲದೆ  ಪ್ರಾಮಾಣಿಕವಾಗಿ ಚುನಾವಣೆ ನಡೆಯಬೇಕಿದೆ ಎಂಬುದನ್ನು ತಾನು ಹರಿಯಬಿಟ್ಟಿರುವ 3 ನಿಮಿಷಗಳ ವೀಡಿಯೋದಲ್ಲಿ ಹೇಳಿದ್ದಾರೆ. 

ಈ ನಡುವೆ ಬೆಂಗಳೂರಿಗೆ ಆಗಮಿಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರನ್ನು ಉಪೇಂದ್ರ ಭೇಟಿಮಾಡಲುದ್ದೇಶಿಸಿರುವ ನಿರ್ಧಾರ ಕೂಡಾ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.   ಅತ್ತ ತಮಿಳುನಾಡಲ್ಲಿ ರಜನಿಕಾಂತ್ ಅವರು ಪಕ್ಷ ಕಟ್ಟುವ ಮಾತನಾಡುತ್ತಾರೆ, ಇತ್ತ ಕನ್ನಡ ನಾಡಲ್ಲಿ ಉಪೇಂದ್ರ ಅವರು ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ಇದರ ಹಿಂದಿನ ಮರ್ಮ ಏನು ಎಂಬುದೇ ಕುತೂಹಲದ ಪ್ರಶ್ನೆ. 


ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್