ಮನೋರಂಜನೆ

1 week ago
ಚಿತ್ರ ಮಂದಿರಗಳಲ್ಲಿ ತಂಪು ಪಾನೀಯಗಳ ಬದಲು ಎಳೆನೀರು ಮಾರಾಟ ಕಡ್ಡಾಯ
ಸುದ್ದಿಗಳು/ ಮನೋರಂಜನೆ 0

ಚಿತ್ರ ಮಂದಿರಗಳಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ? ಎಂದು ಪ್ರಶ್ನಿಸಬಹುದು. ಆದರೆ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ಎಳನೀರು ಮಾರಾಟ ಖಾಡ್ಡಾಯವನೇ. 

ಮಲ್ಟಿಪ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ತಂಪು ಪಾನೀಯಗಳ ಬದಲು ಎಳೆನೀರು ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಮೈಸೂರು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. 

ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳಿಂದ ಚಿತ್ರಮಂದಿರಗಳ ಒಕ್ಕೂಟದ ಅಧ್ಯಕ್ಷರಿಗೆ ಪತ್ರ ರವಾನೆಯಾಗಿದೆ. ರಾಜ್ಯ ತೋಟಗಾರಿಕೆ ಇಲಾಖೆಯ ಆಯುಕ್ತರಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಮುಂದಾದ ಮೈಸೂರು ಡಿ.ಸಿ., ರಂದೀಪ್, ಎಲ್ಲಾ  ಮಲ್ಟಿಪ್ಲೆಕ್ಸ್ ಹಾಗೂ ಚಲನಚಿತ್ರ ಮಂದಿರಗಳಲ್ಲಿ ತಂಪು ಪಾನೀಯಗಳ ಬದಲು ಎಳೆನೀರು ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಸೂಚಿಸಿದ್ದಾರೆ. 

 ಚಿಕ್ಕಮಂಗಳೂರಿನ ವಿಧಾನಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್ ರವರು ರಾಜ್ಯ  ಸರ್ಕಾರವನ್ನು ಒತ್ತಾಯಸಿದ್ದರ ಹಿನ್ನಲೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಹೇಳಲಾಗುತ್ತಿದೆ. 

ಬರದಿಂದ ತತ್ತರಿಸಿರುವ  ರಾಜ್ಯದ ರೈತರಿಗೆ ಬೆಂಬಲ ನೀಡುವ ಹಿನ್ನೆಲೆಯಲ್ಲಿ ಸರ್ಕಾರ  ನಿರ್ಧಾರ ಕೈಗೊಂಡಿದೆ ಎಂದೂ ಹೇಳಲಾಗುತ್ತಿದೆ. 

Related Articles