ಮನೋರಂಜನೆ

7 months ago news image
ದಿಗಂತ್ ಮತ್ತೆ ಬಣ್ಣ ಹಚ್ಚಲಿದ್ದಾರೆ..! ಯಾವುದು ಆ ಸಿನೆಮಾ..?
ಸುದ್ದಿಗಳು/ ಮನೋರಂಜನೆ 0

ನಟ ದಿಗಂತ್ ಹಲವು ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ಪುಷ್ಕರ್ ನಿರ್ಮಾಣದ ಹೊಸ ಚಿತ್ರವೊಂದರ ನಾಯಕ ನಟನಾಗಿ ನಟಿಸಲಿದ್ದಾರೆ. ಸದ್ಯಕ್ಕೆ ಚಿತ್ರದ ಕೆಲಸಗಳು ಶುರುವಾಗಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದ ನಿರ್ದೇಶಕರು ಸೆನ್ನಾ ಹೆಗಡೆ. ಕಾಸರಗೋಡು ಮೂಲದ ಸೆನ್ನಾ ಈ ಹಿಂದೆ ಮಲಯಾಳಂನಲ್ಲಿ '0-41*' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಇದೊಂದು ರೊಮ್ಯಾಂಟಿಕ್-ಕಾಮಿಡಿ ಚಿತ್ರವಾಗಿದೆ. ಜೊತೆಗೆ ದಿಗಂತ್ ಕೆರಿಯರ್‌ನಲ್ಲಿ ಇದು ವಿಭಿನ್ನ ಚಿತ್ರವಾಗಲಿದೆ.

 ಪುಷ್ಕರ್ ಮತ್ತು ರಕ್ಷಿತ್ ಶೆಟ್ಟಿ ವಿವಿಧ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಎಂಬ ಚಿತ್ರದ ಶೂಟಿಂಗ್ ಮುಗಿದಿದೆ.  'ಭೀಮಸೇನ ನಳಮಹರಾಜ' ಎಂಬ ಚಿತ್ರದ ಕೆಲಸ ಸಹ ಶುರುವಾಗಿದೆ. ಈ ಮಧ್ಯೆ ಪುಷ್ಕರ್ ಮತ್ತು ರಕ್ಷಿತ್ ಇನ್ನೊಂದು ಹೊಸ ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರಕ್ಕೆ ದಿಗಂತ್‍ರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಚಿತ್ರ ಬರುವ ನವೆಂಬರ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

'ಚಾರ್ಲಿ' ಎಂಬ ಹೊಸ ಚಿತ್ರದಲ್ಲಿ  ದಿಗಂತ್ ನಟಿಸಬೇಕಾಗಿತ್ತು. ಆದರೆ ಚಿತ್ರದ ನಿರ್ಮಾಪಕರಾದ ಖಾಸನೀಸ್ ಸಹೋದರರು ನಾಪತ್ತೆಯಾದ ಕಾರಣ ಚಿತ್ರದ ಶೂಟಿಂಗ್ ಅರ್ಧದಲ್ಲೇ ನಿಂತು ಹೋಗಿತ್ತು.

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್