ಮನೋರಂಜನೆ

7 months ago news image
'ಬೋಂಬೆ ಹೇಳುತೈತೆ ಸೈನಿಕನ ಬಗ್ಗೆ 'ಬೋಂಬೆ ಹೇಳುತೈತೆ'
ಸುದ್ದಿಗಳು/ ಮನೋರಂಜನೆ 0

ದಶಕಗಳ ಹಿಂದೆ 'ಎ' ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು 'ಮಾರಿ ಕಣ್ಣು ಹೋರಿಮ್ಯಾಗೆ....' ಹಾಡನ್ನು ಹಿಟ್ ಆಗಿಸಿದ್ದರು. ಅದೇ ಹಾಡು  'ಮಾರಿ ಕಣ್ಣು ಹೋರಿಮ್ಯಾಗೆ' ಎಂಬ ಚಿತ್ರಕ್ಕೆ ಪ್ರೇರಣೆಯಾಯಿತು. ಇದೀಗ 'ರಾಜ ಕುಮಾರ' ಸರದಿ. 'ರಾಜಕುಮಾರ' ಚಿತ್ರದಲ್ಲಿನ 'ಬೋಂಬೆ ಹೇಳುತೈತೆ...' ಹಾಡು ಕೂಡಾ ಹೊಸ ದೃಶ್ಯ ಕಾವ್ಯಕ್ಕೆ  ಅವಕಾಶ ಮಾಡಿಕೊಟ್ಟಿದೆ. ಅಂದರೆ 'ಬೋಂಬೆ ಹೇಳುತೈತೆ..' ಎಂಬ ಹೊಸ ಹಾಡು  ತಯಾರಾಗಿದೆ. 

'ರಾಜಕುಮಾರ' ಚಿತ್ರದಲ್ಲಿನ 'ಬೋಂಬೆ ಹೇಳುತೈತೆ...' ಹಿಟ್ ಸಾಂಗ್. ಹಾಗಾಗಿ ಅದೇ ಹಾಡಿನ ಟೈಟಲ್ ಬಳಸಿ  ಗುರುಚರಣ್ ಕಂಬೈನ್ಸ್ ಹಾಗೂ ಟಿಲ್ಟ್ ಎನ್.ಸಿ ಪ್ರೊಡಕ್ಷನ್ಸ್  'ಬೊಂಬೆ ಹೇಳುತೈತೆ'  ಹಾಡಿನ ಮೂಲಕ ಸಮರಾಂಗಣದ  ಯೋಧನೊಬ್ಬನ ಕಥೆ ಹೇಳುತ್ತಿದೆ. 

ಈ ಕಿರು ಕಾವ್ಯ ದೃಶ್ಯ ಸೊಬಗಾಗಿ ಕಾಣಿಸಿಕೊಂಡಿದ್ದು ಇದರಲ್ಲಿ ಶಶಾಂಕ್, ಅನ್ಸುಲಿಕಾ, ನಂದನ್, ಚೈತ್ರ, ಮೊದಲಾದವರು ಸನಾರ್ಭಕ್ಕೆ ತಕ್ಕಂತೆ ನಟಿಸಿದ್ದಾರೆ. 

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ  'ಬೊಂಬೆ ಹೇಳುತೈತೆ'  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಿಮ್ಮ ಅಭಿಪ್ರಾಯಗಳು


ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್