ಸೌಂದರ್ಯ

2 weeks ago lifestyle
ಸದೃಢ ಕೂದಲಿಗೆ ಬಳಸಿ ದಾಸವಾಳ ಎಣ್ಣೆ
ಜೀವನಶೈಲಿಗಳು/ ಸೌಂದರ್ಯ 0

ವರ್ಷವಿಡೀ ಹೂವುಗಳಿಂದ ನಳನಳಿಸುವ ದಾಸವಾಳ ಬರೀ ಅಲಂಕಾರಿಕ ಸಸ್ಯ ಮಾತ್ರವಲ್ಲ, ಬದಲಿಗೆ ಇದು ಹಲವಾರು ಔಷಧೀಯ ಗುಣಗಳನ್ನು ಒಳಗೊಂಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮುಖ್ಯವಾದ ವಿಚಾರ ಎಂದರೆ ಸೌಂದರ್ಯವರ್ಧಕವಾಗಿಯೂ ಬಳಸಲ್ಪಡುವ ದಾಸವಾಳ ಕೂದಲಿನ ಆರೈಕೆಗೆ ಬಹಳ ಒಳ್ಳೆಯದು. ಅದಕ್ಕಾಗಿಯೇ ನಮ್ಮ ಅಜ್ಜಿ, ಮುತ್ತಜ್ಜಿಯರು ದಾಸವಾಳದ ಎಣ್ಣೆ, ಗೊಂಪುಗಳನ್ನು ಬಳಸುತ್ತಿದ್ದದ್ದು. ಕೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿರುವ ದಾಸವಾಳದ ಎಣ್ಣೆಯಿಂದ ಕೂದಲಿಗೆ ನೈಸರ್ಗಿಕವಾದ ಕಪ್ಪು ಬಣ್ಣ ....


ಮುಂದೆ...
3 weeks ago lifestyle
ಮನಸ್ಸಿನ ರಂಗು ಮದರಂಗಿಯಲ್ಲಿ...
ಜೀವನಶೈಲಿಗಳು/ ಸೌಂದರ್ಯ 0

ಅದು ರಂಗುರಂಗಿನ ಚಿತ್ತಾರ. ಮನಸೂರೆಗೊಳ್ಳುವಂತಹ ವಿನ್ಯಾಸ. ಒಮ್ಮೆ ನೋಡಿದರೆ ಸಾಕು, ನನಗೂ ಬೇಕು ಎಂಬ ಹಂಬಲ. ಏನೂ ಎಂದು ಆಲೋಚನೆ ಮಾಡುತ್ತಿದ್ದೀರಾ? ಅದೇ ಮನಮೋಹಕ ಮದರಂಗಿ. ಶುಭ ಸಮಾರಂಭಗಳಲ್ಲಿ ತಮ್ಮ ಕೋಮಲ ಕೈಗಳನ್ನು ಬಣ್ಣಬಣ್ಣದ ಚಿತ್ತಾರಗಳಿಂದ ಅಲಂಕರಿಸಿಕೊಳ್ಳುವುದೆಂದರೆ ಹೆಣ್ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅದರ ಸಂಭ್ರಮವೇ ಬೇರೇ. ಖುಷಿಯಿಂದ ನಲಿದಾಡುತ್ತಾರೆ. ಇನ್ನು ಮೊದಲಿನಿಂದಲೂ ಮದುರಂಗಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿದೆ. ಅದರಲ್ಲಿನ ವಿನ್ಯಾಸಗಳು,  ಅದರ ಆಚರಣೆಯ ರೀತಿ ....


ಮುಂದೆ...
4 weeks ago lifestyle
ಸುಗಂಧ ರಾಣಿ ಪಾರಿಜಾತ
ಜೀವನಶೈಲಿಗಳು/ ಸೌಂದರ್ಯ 0

ಪಂಚವೃಕ್ಷಗಳಲ್ಲಿ ಒಂದಾದ ಪಾರಿಜಾತವು ಸಂಜೆಯ ವೇಳೆ ಹೂವರಳಿಸಿ ಸುತ್ತೆಲ್ಲಾ ಪರಿಮಳ ಬೀರುವ ಸುಂದರ ಹೂವು. ರಾತ್ರಿಯ ವೇಳೆ ಸುವಾಸನೆ ಬೀರುವ ಪಾರಿಜಾತದ ವೈಜ್ಞಾನಿಕ ಹೆಸರು ನಿಕಾಂಥಿಸ್ ಅರ್ಬಸ್ಟ್ರಿಸ್ಟಿಸ್. ರಾತ್ರಿಯಲ್ಲಿ ಹೂವರಳಿಸುವ ದುಃಖತಪ್ತ ಮರ ಎಂಬುದು ಇದರರ್ಥ. ಆಂಗ್ಲ ಭಾಷೆಯಲ್ಲಿ ನೈಟ್ ಜಾಸ್ಮಿನ್, ಹಿಂದಿಯಲ್ಲಿ ಹರಸಿಂಗಾರ್, ತಮಿಳಿನಲ್ಲಿ ಮಂಜಪೂ, ತೆಲುಗಿನಲ್ಲಿ ಪಗಡಮಲ್ಲೆ ಎಂದು ಕರೆಯಲ್ಪಡುವ ಪಾರಿಜಾತ ಔಷಧೀಯ ಗುಣಗಳನ್ನು ಹೊಂದಿದೆ. ಸುಗಂಧಿತ ಪುಷ್ಪಗಳ ಪೈಕಿ ವಿಶಿಷ್ಟ ಸ್ಥಾನ ....


ಮುಂದೆ...
1 month ago lifestyle
ಮನಮೋಹಕವಾದ ಮಣ್ಣಿನ ಆಭರಣ
ಜೀವನಶೈಲಿಗಳು/ ಸೌಂದರ್ಯ 0

ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್ ಕೂಡಾ ಒಂದು. ದಿನನಿತ್ಯ ಹೊಸಹೊಸ ಫ್ಯಾಷನ್ ಗಳು ಕಣ್ಣಿಗೆ ಬೀಳುವುದಂತೂ ಸತ್ಯ. ಇಂದು ಫ್ಯಾಷನ್ ಆಗಿ ಕಂಡದ್ದು ನಾಳೆ ಮಾಯ. ಮುಖ್ಯವಾಗಿ ಜ್ಯುವೆಲ್ಲರಿ ವಿಷಯದಲ್ಲಿ ಈಗಾಗಲೇ ಬದಲಾವಣೆ ಆಗಿದೆ ಮತ್ತು ನಿರಂತರವಾಗಿ ಆಗುತ್ತಲೂ ಇದೆ. ಮೊದಲು ಚಿನ್ನ, ಮತ್ತೆ ಬೆಳ್ಳಿ, ಮುಂದೆ ಒಂದು ಗ್ರಾಂ ಚಿನ್ನ, ಚಿನ್ನ ಲೇಪಿತ ಜ್ಯುವೆಲ್ಲರಿ, ಬೆಳ್ಳಿ ಲೇಪಿತ ಜ್ಯುವೆಲ್ಲರಿ, ಫ್ಯಾನ್ಸಿ ಆಭರಣಗಳು ಹೀಗೆ ಗೊಂದಲ ಹುಟ್ಟಿಸುವಷ್ಟು ಆಯ್ಕೆಗಳು ಕಣ್ಣ ಮುಂದಿರುವ ....


ಮುಂದೆ...
2 months ago lifestyle
ಸೀರೆಯ ಅಂದ ಇಮ್ಮಡಿಗೊಳಿಸುವ ಬ್ರೋಚ್
ಜೀವನಶೈಲಿಗಳು/ ಸೌಂದರ್ಯ 0

ಹಬ್ಬ, ಹರಿದಿನ, ಮದುವೆ. ಮದುರಂಗಿ ಹೀಗೆ ಎಲ್ಲಾ ಕಾರ್ಯಕ್ರಮಗಳ ಕೇಂದ್ರ ಬಿಂದು ಸ್ಯಾರಿ. ಅಷ್ಟೇ ಅಲ್ಲದೇ ಹೆಣ್ಮಕ್ಕಳು ಸೀರೆ ಉಡುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಕಾಲಕ್ಕೆ ತಕ್ಕಂತೆ ಸ್ಯಾರಿ ಉಡುವ ಶೈಲಿಯಲ್ಲಿ ಬದಲಾವಣೆ ಆಗಿದೆ, ಆಗುತ್ತಲೂ ಇದೆ. ಇಂತಿಪ್ಪ ಸ್ಯಾರಿಗೆ ಡಿಫರೆಂಟ್ ಲುಕ್ ಇರುವ ಬ್ರೋಚ್ ಧರಿಸುವುದು ಇಂದಿನ ನವಯುಗದ ಫ್ಯಾಶನ್. ನಾನಾ ನಮೂನೆಯ ಬ್ರೋಚ್ ಗಳು ಇಂದಿನ ಮಾರುಕಟ್ಟೆಯಲ್ಲಿ ಲಭ್ಯವಿದೆ. ನವಿಲಿನ ಆಕಾರ, ಮೀನು, ನಕ್ಷತ್ರ, ಹೂವು, ಮುತ್ತು, ಚಿನ್ನ ಲೇಪಿತ, ಬೆಳ್ಳಿ ಲೇಪಿತ, ಕುಂದನ್ ....


ಮುಂದೆ...
2 months ago lifestyle
ತಾಮ್ರದ ಪಾತ್ರೆಯಲ್ಲಿದೆ ಆರೋಗ್ಯದ ಗುಟ್ಟು
ಜೀವನಶೈಲಿಗಳು/ ಸೌಂದರ್ಯ 0

ತಾಮ್ರದ ಪಾತ್ರೆಯಲ್ಲಿ ಇರುವ ನೀರನ್ನು ಕುಡಿಯುವುದರಿಂದ ಸದಾ ಕಾಲ ಆರೋಗ್ಯದಿಂದ ಇರಬಹುದು ಎಂದು ನನ್ನ ಅಜ್ಜಿ ಯಾವತ್ತೋ ಹೇಳಿದ ನೆನಪು... ಅಷ್ಟು ಮಾತ್ರವಲ್ಲದೇ ಅಜ್ಜಿಯ ಕಾಲದಲ್ಲಿ ಮನೆಯಲ್ಲಿ ತಾಮ್ರದ ಪಾತ್ರೆಯಲ್ಲಿ ತುಂಬಿಸಿದ ನೀರನ್ನೇ ಕುಡಿಯುತ್ತಿದ್ದೆವು. ಹಿಂದಿನ ಕಾಲದಿಂದಲೂ ಬಂದಿರುವ ಈ ಆಚರಣೆಗೆ ಆಯುರ್ವೇದ ಶಾಸ್ತ್ರದಲ್ಲಿ ಮಹತ್ತರವಾದ ಸ್ಥಾನವಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ಸದೃಡ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನಮ್ಮ ದೇಹಕ್ಕೆ ತಾಮ್ರದ ಅವಶ್ಯಕತೆ ತುಂಬಾ ಇದೆ. ಅಷ್ಟು ....


ಮುಂದೆ...
3 months ago lifestyle
ತಲೆಕೂದಲು ಸೌಂದರ್ಯಕ್ಕೆ ಮುಕುಟವಿಟ್ಟಂತೆ
ಜೀವನಶೈಲಿಗಳು/ ಸೌಂದರ್ಯ 0

ಸೌಂದರ್ಯ ಕಾಪಾಡಲು ಎಷ್ಟೇ ಹರಸಾಹಸ ಪಟ್ಟರೂ ಕೆಲವೊಮ್ಮೆ ಇವು ನಮ್ಮಕೈಯಿಂದ ಅಸಾಧ್ಯ ಅನಿಸಿಬಿಡುವುದುಂಟು. ಕೂದಲು ಬೆಳ್ಳಗಾಗುವುದು ಹಾಗೂ ಉದುರುವುದು ಇತ್ತೀಚಿಗೆ ಕಂಡುಬರುತ್ತಿರುವ ಸಮಸ್ಯೆ.ಆದರೆ ನೈಸರ್ಗಿಕ ವಸ್ತುಗಳ ಬಳಕೆಯಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಈ ಪೈಕಿ ಕೂದಲ ಆರೈಕೆಯಲ್ಲಿ ಪ್ರಮುಖಪಾತ್ರವಹಿಸುವುದು ಕರಿಬೇವು. ಕರಿಬೇವಿನಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲನ್ನು ಹೆಚ್ಚು ಶಕ್ತಿಶಾಲಿಯನ್ನಾಗಿಸುತ್ತದೆ.ಅದರ ಸೇವನೆ ಅಥವ ಅದನ್ನು ....


ಮುಂದೆ...
3 months ago lifestyle
ಹೆಣ್ಮಕ್ಕಳ ಕಣ್ಮಣಿ ಕುರ್ತಾ / ಮನಕ್ಕೆ ಹಿತವೆನಿಸುವ ಕುರ್ತಾ
ಜೀವನಶೈಲಿಗಳು/ ಸೌಂದರ್ಯ 0

ದಿನನಿತ್ಯ ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್ ಕೂಡಾ ಒಂದು. ದಿನಕ್ಕೊಂದು ಹೊಸ ಫ್ಯಾಷನ್ ಕಣ್ಣಿಗೆ ಬೀಳುವುದಂತೂ ಸತ್ಯ. ಇಂದು ಫ್ಯಾಷನ್ ಆಗಿ ಕಂಡದ್ದು ನಾಳೆ ಮಾಯ. ಅದರಲ್ಲೂ ಉಡುಗೆಯ ವಿಷಯದಲ್ಲಿ ಹೇಳುವುದೇ ಬೇಡ. ದಿನಕ್ಕೊಂದು ಫ್ಯಾಷನ್.. ತರತರದ ಡ್ರೆಸ್ ಗಳು.. ಎಷ್ಟೆಂದರೆ ಅದನ್ನು ತೆಗೆದುಕೊಳ್ಳೋದಾ ಅಲ್ಲಾ ಇದ್ದನ್ನಾ? ಅದನ್ನು ಹಾಕಿಕೊಳ್ಳೋದಾ ಅಲ್ಲಾ ಇದು ಹಾಕಿಕೊಳ್ಳಲಾ ಎಂದು ಗೊಂದಲ ಹುಟ್ಟಿಸುವಷ್ಟು ಫ್ಯಾಷನ್ ಲೋಕದಲ್ಲಿ ಬದಲಾವಣೆ ಆಗಿದೆ ಮತ್ತು ನಿರಂತರವಾಗಿ ಆಗುತ್ತಲೂ ....


ಮುಂದೆ...
3 months ago lifestyle
ಅಂದ ಹೆಚ್ಚಿಸುವ ಹಾಫ್ ಸ್ಯಾರಿ...
ಜೀವನಶೈಲಿಗಳು/ ಸೌಂದರ್ಯ 0

ಹಿಂದಿನ ಕಾಲದ ಸಿನಿಮಾದಲ್ಲಿ ನಟಿಮಣಿಯರು ಧರಿಸಿ ಮೆರೆದಾಡುತ್ತಿದ್ದ ಹಾಫ್ ಸ್ಯಾರಿ ಇದೀಗ ಫ್ಯಾಷನ್ ರೂಪ ಪಡೆದು ಮತ್ತೊಮ್ಮೆ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತಿದೆ ಎಂದರೆ ನಂಬಲು ಸಾಧ್ಯವೇ? ಆದರೂ ನಂಬಲೇ ಬೇಕು. ಓಲ್ಡ್ ಈಸ್ ಗೋಲ್ಡ್ ಎನ್ನುವಂತೆ ಹಳೆಯ ಕಾಲದ ಹಾಫ್ ಸ್ಯಾರಿ ಇಂದಿನ ಯುವತಿಯರ ಕಣ್ಮಣಿ. ಚೂಡಿದಾರ್, ಜೀನ್ಸ್, ಲೆಗ್ಗಿಂಗ್ಸ್, ಅನಾರ್ಕಲಿ ಹೀಗೆ ನಾನಾ ನಮೂನೆಯ ಫ್ಯಾಷನ್ ನ ಜೊತೆಗೆ ಹಾಫ್ ಸ್ಯಾರಿ ಹಂಗಾಮ ಆರಂಭವಾಗಿದೆ. ಎಲ್ಲಿ ನೋಡಿದರೂ ಹಾಫ್ ಸ್ಯಾರಿಯದ್ದೇ ಕಾರುಬಾರು. ಕಾಲೇಜು ಡೇ, ಫೇರ್ ವೆಲ್ ....


ಮುಂದೆ...
3 months ago lifestyle
50ರ ಹರೆಯದಲ್ಲೂ ಸೌಂದರ್ಯ ಕಾಪಾಡಬಹುದು: ಇಲ್ಲಿದೆ ಬ್ಯೂಟಿ ಕ್ವೀನ್​​​ ಸಲಹೆ
ಜೀವನಶೈಲಿಗಳು/ ಸೌಂದರ್ಯ 0

ವಿವಾಹವಾದ ಮಹಿಳೆ 50ನೇ ವಯಸ್ಸಿನಲ್ಲೂ ಫಿಟ್ನೆಸ್ ಮತ್ತು ಸೌಂದರ್ಯ ಎರಡನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಮಿಸಸ್ ಇಂಡಿಯಾ ಬ್ಯೂಟಿ ಕ್ವೀನ್​​​ ಕ್ಲಾಸಿಕ್​​​ ವಿಜೇತೆ ಬೆಂಗಳೂರಿನ ವೀಣಾ ಜೈನ್ 50ನೇ ವಯಸ್ಸಿನಲ್ಲಿ ಲಾಸ್​​​ ವೇಗಾಸ್​​​ ನಲ್ಲಿ ನಡೆದ ಮಿಸಸ್​​​​ ಗ್ಲೋಬ್​​​ 2017 ರಲ್ಲಿ ಅತ್ಯುತ್ತಮ ವಾಗ್ಮಿ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರಿಗೆ ಭೇಟಿ ನೀಡಿದ ಅವರು ಎಲ್ಲರ ಕುತೂಹಲದ ಕೇಂದ್ರಬಿಂದುವಾದರು. ಬೆಂಗಳೂರು ಪ್ರೆಸ್ ಕ್ಲಬ್ ಗೆ ಭೇಟಿ ನೀಡಿ ತಮ್ಮ ಸಾಧನೆಯ ಪಯಣದ ಬಗ್ಗೆ ....


ಮುಂದೆ...
3 months ago lifestyle
ಘಲ್ ಘಲ್ ಎನುತಾವ ಗೆಜ್ಜೆ
ಜೀವನಶೈಲಿಗಳು/ ಸೌಂದರ್ಯ 0

ಹಿಂದಿನ ಕಾಲದಲ್ಲಿ ಗೆಜ್ಜೆ ಹಾಕುವುದು ಸಂಪ್ರದಾಯ. ಹಣೆಗೆ ಕುಂಕುಮ, ಕಿವಿಗೆ ಓಲೆ, ಕತ್ತಿಗೆ ಸರ, ಕೈಗಳಿಗೆ ಬಳೆ ಹೇಗೆ ಭೂಷಣವೋ, ಹಾಗೆ ಕಾಲಿಗೆ ಮುದ್ದಾದ ಗೆಜ್ಜೆಗಳು. ಘಲ್ ಘಲ್ ಎನ್ನುತ್ತಾ ಶಬ್ಧ ಮಾಡುತ್ತಾ ಹೆಣ್ ಮಗಳು ಮನೆಯಿಡೀ ಓಡಾಡುತ್ತಿದ್ದರೆ ಅದನ್ನು ನೋಡುವುದೇ ಸಂಭ್ರಮ. ಗಿಜಿಗಿಜಿ ಎಂದು ಕೇಳುವ ಶಬ್ಧವೇ ತುಂಬಾ ಸೊಬಗು. ಅಲ್ಲದೆ ಗೆಜ್ಜೆಯ ಮೇಲೆ ಹೆಣ್ ಮಕ್ಕಳಿಗೆ ಹೇಳಲಾರದ ಭಾವನಾತ್ಮಕ ಸಂಬಂಧ. ಹೇಳಿ ಕೇಳಿ ಇದು ಫ್ಯಾಷನ್ ಯುಗ. ಎಲ್ಲಾ ವಿಷಯದಲ್ಲಿ ಫ್ಯಾಷನ್ ಲಗ್ಗೆಯಿಟ್ಟಿದೆ. ಗೆಜ್ಜೆಯಲ್ಲೂ ....


ಮುಂದೆ...
3 months ago lifestyle
ನೀಲಿ ಸುಂದರಿ ನೇರಳೆ ಹಣ್ಣು
ಜೀವನಶೈಲಿಗಳು/ ಸೌಂದರ್ಯ 0

ಒಮ್ಮೆ ತಿಂದರೆ ಸಾಕು, ಮತ್ತೊಮ್ಮೆ ಸವಿಯಬೇಕು ಎಂದೆನಿಸುವ ಈ ನೀಲಿ ಸುಂದರಿಯನ್ನುಇಷ್ಟಪಡದವರಾರು ಹೇಳಿ? ವರುಷಕ್ಕೊಮ್ಮೆ ಕಾಣಸಿಗುವ ಈ ಹಣ್ಣು ಎಲ್ಲರಿಗೂ ಪ್ರಿಯ. ರೋಗ ಶಮನ ಮಾಡುವಲ್ಲಿ ಪ್ರಮುಖ ಔಷಧಿಯಾಗಿ ಕಾರ್ಯನಿರ್ವಹಿಸುವ ಈ ನೇರಳೆ ಹಣ್ಣು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ಕಬ್ಬಿಣ, ಪೊಟಾಶಿಯಂ, ಮೇಗ್ನೇಶಿಯಂ, ಪ್ರೋಸ್ಫರಸ್, ವಿಟಮಿನ್ ಸಿ ಅಂಶಗಳನ್ನು ಹೊಂದಿದ ನೇರಳೆ ಹಣ್ಣು ಬರೀ ಆರೋಗ್ಯಕಾರಕ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ತಿನ್ನಲು ರುಚಿರುಚಿಯಾದ ಈ ಹಣ್ಣು ಹಲವು ....


ಮುಂದೆ...
3 months ago lifestyle
ಆಕರ್ಷಕ ನಾಗಲಿಂಗಪುಷ್ಪ/ ಮನಸೆಳೆವ ನಾಗಲಿಂಗಪುಷ್ಪ
ಜೀವನಶೈಲಿಗಳು/ ಸೌಂದರ್ಯ 0

ಕಾಣಲು ಆಕರ್ಷಕವಾದ, ಸುಗಂ‍ಧ ಭರಿತ ಈ ಹೂವು ಕೈಲಾಸದ ಒಡೆಯ ಶಿವನಿಗೆ ಪ್ರಿಯ. ಸಾಮಾನ್ಯವಾಗಿ ಶಿವ ದೇವಾಲಯದ ಎದುರು ಕಂಡುಬರುವ ಇದರ ಹೆಸರು ನಾಗಲಿಂಗ ಪುಷ್ಪ. ತಮಿಳಿನಲ್ಲಿ ಶಿವಲಿಂಗ ಪುಷ್ಪ, ತೆಲುಗಿನಲ್ಲಿ ಮಲ್ಲಿಕಾರ್ಜುನ ಪುಷ್ಟ ಎಂದು ಕರೆಯಲ್ಪಡುವ ಈ ಹೂವಿಗೆ ಇಂಗ್ಲೀಷ್ ನಲ್ಲಿ ಕೇನಾನ್ ಬಾಲ್ ಟ್ರೀ ಎಂಬ ಹೆಸರಿದೆ. ಉತ್ತರ ಭಾರತದಲ್ಲಿ ಕೈಲಾಸಪತಿ ಹೂವು ಎಂದು ಪ್ರಚಲಿತದಲ್ಲಿರುವ ಇದಕ್ಕೆ ತೆಲುಗಿನಲ್ಲಿ ಶಿವಕಮಲ ಎಂದು ಹೆಸರು. ಮೂಲತ ದಕ್ಷಿಣ ಅಮೇರಿಕಾ ಮತ್ತು ಕೆರೆಬಿಯನ್ ನಲ್ಲಿ ಬೆಳೆಯುವ ಈ ಮರವು ....


ಮುಂದೆ...
4 months ago lifestyle
ಸೊರಗಿದ ಕೈಗಳ ಅಂದಕ್ಕೆ ಮೆನಿಕ್ಯೂರ್
ಜೀವನಶೈಲಿಗಳು/ ಸೌಂದರ್ಯ 0

ಸಾಗುತ್ತಿರುವ ವೇಗದ ಬದುಕಿನಲ್ಲಿ ಮಹಿಳೆ ಯಾವಾಗಲೂ ತನ್ನದೇ ಆದ ಕೆಲಸ ಕಾರ್ಯಗಳಲ್ಲಿ ಬ್ಯುಸಿಯಾಗಿರುತ್ತಾಳೆ. ಮನೆ, ಗಂಡ, ಮಕ್ಕಳು ಎಂದು ನಿರಂತರವಾಗಿ ಕೆಲಸ ಮಾಡುವ ಆಕೆಗೆ ತನ್ನ ಸೌಂದರ್ಯದ ಬಗ್ಗೆ ಗಮನಕೊಡಲು ಪುರುಸೊತ್ತೇ ಇರುವುದಿಲ್ಲ. ಮುಖ, ಕಾಲುಗಳಷ್ಟೇ, ಕೈಗಳಿಗೆ ಉಗುರುಗಳಿಗೆ ಪ್ರಾಮುಖ್ಯತೆ ನೀಡಬೇಕು. ಆರೋಗ್ಯದ ದೃಷ್ಟಿಯಿಂದ ಕೈ ಉಗುರುಗಳತ್ತ ಗಮನಹರಿಸಬೇಕಾದುದು ಅಗತ್ಯ. ಕಾಲುಗಳ ಅಂದಕ್ಕೆ ಪೆಡಿಕ್ಯೂರ್ ಇದ್ದ ಹಾಗೆ ಕೈಗಳ ಅಂದಕ್ಕೆ ಮೆನಿಕ್ಯೂರ್ ಮಾಡಿ ಉಗುರುಗಳ ಅಂದ ಹೆಚ್ಚಿಸಬಹುದು. ಅದಕ್ಕಾಗಿ ....


ಮುಂದೆ...
4 months ago lifestyle
ಮುಖದ ಸೌಂದರ್ಯ ಹೆಚ್ಚಿಸಲು ಇಲ್ಲಿದೆ ಮನೆ ಮದ್ದು.
ಜೀವನಶೈಲಿಗಳು/ ಸೌಂದರ್ಯ 0

ಎಲ್ಲರಿಗೂ ಎಲ್ಲರ ಮುಂದೆ ಆಕರ್ಷಕವಾಗಿ, ಬೆಳ್ಳಗೆ ಕಾಣಬೇಕೆನ್ನುವುದು ಇಷ್ಟ . ದಿನಕ್ಕೊಮ್ಮೆ ಬ್ಯೂಟಿಪಾರ್ಲರ್ ಗೂ  ಹೋಗುವವರಿದ್ದಾರೆ. ಬ್ಲೀಚಿಂಗ್ ಅದು ಇದು ಅಂತಾ ಮಾಡಿಸಿಕೊಂಡು ಸಾವಿರಾರು ರೂಪಾಯಿ ಹಣ ಖರ್ಚು ಮಾಡ್ತಾರೆ. ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿಕೊಂಡು ಬೆಳ್ಳಗಿನ ಮುಖ ಪಡೆಯಲು ಇಲ್ಲಿದೆ ಮನೆ ಮದ್ದು.ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಜೇನು ತುಪ್ಪ ಹಾಗೂ ಹಾಲನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಒಂದು ಚಮಚ ಅಕ್ಕಿ ಹಿಟ್ಟಿಗೆ ಸ್ವಲ್ಪ ಹಾಲು, ಹನಿ ಜೇನುತುಪ್ಪ ಹಾಗೂ ಮೈದಾ ಹಿಟ್ಟನ್ನು ....


ಮುಂದೆ...
4 months ago lifestyle
ಮನಸೂರೆಗೊಳ್ಳುವ ಪೇಪರ್ ಜ್ಯುವೆಲ್ಲರಿ
ಜೀವನಶೈಲಿಗಳು/ ಸೌಂದರ್ಯ 0

ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್ ಕೂಡಾ ಒಂದು. ದಿನನಿತ್ಯ ಹೊಸಹೊಸ ಫ್ಯಾಷನ್ ಗಳು ಕಣ್ಣಿಗೆ ಬೀಳುವುದಂತೂ ಸತ್ಯ. ಇಂದು ಫ್ಯಾಷನ್ ಆಗಿ ಕಂಡದ್ದು ನಾಳೆ ಮಾಯ. ಮುಖ್ಯವಾಗಿ ಜ್ಯುವೆಲ್ಲರಿ ವಿಷಯದಲ್ಲಿ ಈಗಾಗಲೇ ಬದಲಾವಣೆ ಆಗಿದೆ ಮತ್ತು ನಿರಂತರವಾಗಿ ಆಗುತ್ತಲೂ ಇದೆ. ಮೊದಲು ಚಿನ್ನ, ಮತ್ತೆ ಬೆಳ್ಳಿ, ಮುಂದೆ ಒಂದು ಗ್ರಾಂ ಚಿನ್ನ, ಚಿನ್ನ ಲೇಪಿತ ಜ್ಯುವೆಲ್ಲರಿ, ಬೆಳ್ಳಿ ಲೇಪಿತ ಜ್ಯುವೆಲ್ಲರಿ, ಫ್ಯಾನ್ಸಿ ಆಭರಣಗಳು ಹೀಗೆ ಗೊಂದಲ ಹುಟ್ಟಿಸುವಷ್ಟು ಆಯ್ಕೆಗಳು ಕಣ್ಣ ಮುಂದಿರುವ ....


ಮುಂದೆ...
4 months ago lifestyle
ಸೌಂದರ್ಯ ವರ್ಧಕ ರೋಸ್ ವಾಟರ್
ಜೀವನಶೈಲಿಗಳು/ ಸೌಂದರ್ಯ 0

ಅಲಂಕಾರ ಪ್ರಿಯೆಯಾಗಿರುವ ಆಕೆಗೆ ಸದಾ ತನ್ನ ಸೌಂದರ್ಯದೇ ಯೋಚನೆ. ಸೌಂದರ್ಯದಲ್ಲಿ ತ್ವಚೆಯ ಆರೋಗ್ಯ ಮತ್ತು ಅದರ ಆರೈಕೆ ಮುಖ್ಯವಾದ ಅಂಶ. ಏಕೆಂದರೆ ಆರೋಗ್ಯಯುತವಾದ ತ್ವಚೆಯಿಂದ ಸೌಂದರ್ಯ ಎದ್ದು ಕಾಣುತ್ತದೆ. ಚರ್ಮದ ಕಾಂತಿ ಹೆಚ್ಚಲು, ತ್ವಚೆಯ ಆರೈಕೆಗೆ ಬೇಕಾದಂತಹ ಹಲವು ಕ್ರೀಮ್ ಗಳು ಮಾರುಕಟ್ಟೆಯಲ್ಲಿ ದೊರೆತರೂ ಅದನ್ನು ಉಪಯೋಗಿಸುವ ಮುನ್ನ ಜಾಗ್ರತೆ ವಹಿಸಬೇಕು. ಕೆಲವರಿಗೆ ಅಲರ್ಜಿ ಆಗಬಹುದು ಅಥವಾ ಕೆಲವರ ಚರ್ಮದ ಮೇಲೆ ಬೇರೆ ತರಹದ ಅಡ್ಡ ಪರಿಣಾಮ ಬೀರಬಹುದು. ಇದು ಯಾವುದರ ರಗಳೆ ಬೇಡ ಎಂದು ಹಲವರು ....


ಮುಂದೆ...
4 months ago lifestyle
ಕಣ್ಮನ ಸೆಳೆಯುವ ಆ್ಯಂಟಿಕ್ ಜ್ಯುವೆಲ್ಲರಿ
ಜೀವನಶೈಲಿಗಳು/ ಸೌಂದರ್ಯ 0

ಹಳೆಯ ವಸ್ತುಗಳೇ ಹಾಗೆ... ಆಗ ಕಣ್ಣಿಗೆ ಕೇವಲ ಸಾಮಾನ್ಯದೆಂದು ಕಂಡವು ಈಗ ಅಸಾಮಾನ್ಯ ಎಂದು ತೋರುವ ಕಾಲ. ಅಂದು ಅಯ್ಯೋ ಎಂದು ಮೂಗು ಮುರಿದವರು ಇಂದು ವ್ಹಾವ್ ಎಂದು ಉದ್ಘರಿಸುವಂತಾಗಿದೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿ ಬಿಟ್ಟಿದೆ ಆ್ಯಂಟಿಕ್ ಜ್ಯುವೆಲ್ಲರಿ. ವಿಶಿಷ್ಟ ಮನಮೋಹಕ ವಿನ್ಯಾಸಗಳಿಂದ ನಾರಿಯರ ಮನ ಕದ್ದು ಬಿಟ್ಟಿದೆ. ಆಭರಣದ ವಿನ್ಯಾಸ ಹಳತಾದರೂ ಅದನ್ನು ಧರಿಸಿ ಮೆರೆದಾಡುವರು ಮಾತ್ರ ಮಾಡರ್ನ್ ಬೆಡಗಿಯರು ಎಂದರೆ ತಪ್ಪಾಗಲಾರದು. ಎತ್ತಣ ಮಾಮರ ಎತ್ತಣ ಕೋಗಿಲೆ ಏನಿದೇನಿ ಸಂಬಂಧ ಎಂಬುದು ಇದಕ್ಕೆ ....


ಮುಂದೆ...
10 months ago lifestyle
ಸ್ಕಿನ್ ವೈಟನಿಂಗ್ ಗೆ ‘ಕಡಲೆಹಿಟ್ಟಿ’ನ ಫೇಸ್ ಪ್ಯಾಕ್
ಜೀವನಶೈಲಿಗಳು/ ಸೌಂದರ್ಯ 0

ಯುವಕರಾಗಲಿ, ಯುವತಿಯರಾಗಲಿ ಪ್ರತಿಯೊಬ್ಬರು ಫೇರ್ ಸ್ಕಿನ್ ಇರಬೇಕೆಂದು ಬಯಸುವವರೇ…ಅದರಲ್ಲೂ ಸ್ಕಿನ್ ವೈಟನಿಂಗ್ ಗೆ ಉಪಯೋಗಿಸದ ಕ್ರೀಮ್ ಗಳಿಲ್ಲ, ಫೇಶಿಯಲ್ ಗಳಿಲ್ಲ. ಈಗಂತೂ ಆನ್ ಲೈನ್ ನಲ್ಲಿ, ಕಾಸ್ಮೆಟಿಕ್ಸ್ ಶಾಪ್ ಗಲ್ಲಿ ನಾನಾ ನಮೂನೆಯ ಸ್ಕಿನ್ ವೈಟನಿಂಗ್ ಸೋಪುಗಳು, ಕ್ರೀಮ್ ಗಳು, ಕಾಂಪ್ಯಾಕ್ಟ್ ಪೌಡರ್ ಗಳು ಬಂದಿವೆ. ಆದರೆ ಅದನ್ನೆಲ್ಲಾ ಉಪಯೋಗಿಸಿ ಕೊನೆಗೆ ಯಾವುದೇ ತರಹದ ಒಳ್ಳೆಯ ಫಲಿತಾಂಶ ಕಂಡುಬರಲಿಲ್ಲವೆಂದರೆ ಬೇಸರವಾಗುವುದು ನಮಗೆ. ಅದಕ್ಕೆ ಖರ್ಚಿಲ್ಲದಂತೆ, ನಿಮ್ಮ ....


ಮುಂದೆ...
10 months ago lifestyle
ಬಿಳಿ ಕೂದಲ ನಿವಾರಣೆಗೆ ಟಾಪ್ 10 ಆಯುರ್ವೇದಿಕ್ ಮೆಡಿಸಿನ್ಸ್
ಜೀವನಶೈಲಿಗಳು/ ಸೌಂದರ್ಯ 0

ಸಾಮಾನ್ಯವಾಗಿ ಎಲ್ಲರಲ್ಲಿಯೂ 30 ರ ವಯಸ್ಸಿನ ಆಸುಪಾಸಿನಲ್ಲಿ ಬಿಳಿಗೂದಲು ಇಣುಕುವುದು ಸಹಜ. ನಂತರದ ವರ್ಷಗಳಲ್ಲಿ ಹೆಚ್ಚುತ್ತ ಬಂದು 50 ವರ್ಷ ವಯಸ್ಸಿನ ಹೊತ್ತಿಗೆ ಶೇ.50 ರಷ್ಟು ಬಿಳಿಯಾಗತೊಡಗುತ್ತದೆ. ಆದರೆ ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿಗೂದಲು ಕಂಡುಬರುತ್ತಿದೆ. ತಜ್ಞ ವೈದ್ಯರು ಹೇಳುವಂತೆ ಕೂದಲಿಗೆ ಬಣ್ಣ ಕೊಡುವ ಅಂಶ ಮೆಲನಿನ್ ಕಡಿಮೆಯಾಗುವುದರಿಂದ ಕೂದಲು ಬಿಳಿಯಾಗುತ್ತದೆ. ಇದು ಕೂಡ ಹೆಚ್ಚಿನಂಶ ಅನುವಂಶೀಯವಾಗಿ ಬರುವ ಬಳುವಳಿ. ಬಹಳಷ್ಟು ಜನರಿಗೆ ದೊಡ್ಡ ತಲೆನೋವಾಗಿ ....


ಮುಂದೆ...
10 months ago lifestyle
ಚಳಿಗಾಲಕ್ಕೆ ಬಾಳೆಹಣ್ಣಿನ ಮಾಸ್ಕ್
ಜೀವನಶೈಲಿಗಳು/ ಸೌಂದರ್ಯ 0

ಚಳಿಗಾಲದ ವಾತವರಣ ಫ್ರೆಶ್ ಆಂಡ್ ಕೂಲ್ ಆಗಿದ್ದರೂ ಬಹುತೇಕ ಜನರಿಗೆ ಅದನ್ನು ಎಂಜಾಯ್ ಮಾಡಲು ಆಗುವುದಿಲ್ಲ. ಕಾರಣ ಈ ಕಾಲದಲ್ಲಿ ತ್ವಚೆ ಅತಿ ಎನಿಸುವಷ್ಟು ಶುಷ್ಕಗೊಳ್ಳುತ್ತದೆ. ಅಷ್ಟೇ ಅಲ್ಲ ಕೆರೆತ ಹೆಚ್ಚಿ ನವೆ ಉಂಟಾಗುತ್ತದೆ. ಈ ಸಮಸ್ಯೆ ಕಾಡಬಾರದು, ಇದರಿಂದ ಪಾರಾಗಬೇಕು ಎಂಬ ಆಲೋಚನೆಯಲ್ಲಿ ನೀವಿದ್ದರೆ ಇಂದೇ ಬಾಳೆಹಣ್ಣಿನ ಮಾಸ್ಕ್ ಬಳಸಿ. ಶುಷ್ಕ ತ್ವಚೆಯ ಸಮಸ್ಯೆಗೊಂದು ಫುಲ್ ಸ್ಟಾಪ್ ಇಡಿ. ಹೌದು ಬಾಳೆಹಣ್ಣಿನ ಮಾಸ್ಕ್, ನಿಮ್ಮ ಮನೆಯಲ್ಲಿರುವ ಕೋಲ್ಡ್ ಕ್ರೀಮ್ ಗಿಂತಲೂ ಹೆಚ್ಚಿನ ಎಫೆಕ್ಟ್ ....


ಮುಂದೆ...
11 months ago lifestyle
ಗ್ರೇ ಕೂದಲಿಗೆ ಹೇಳಿ ಗುಡ್ ಬೈ
ಜೀವನಶೈಲಿಗಳು/ ಸೌಂದರ್ಯ 0

ಇಂದಿನ ಜೀವನ ಶೈಲಿ, ಒತ್ತಡ, ಮಾಲಿನ್ಯ ಹೀಗೆ ನಾನಾ ಕಾರಣಗಳಿಂದ ಕೂದಲ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಗಂಡಸರಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಿ ಬಾಲ್ಡ್ ನೆಸ್ ಇದೀಗ ಮಹಿಳೆಯರನ್ನೂ ಕಾಡುತ್ತಿದೆ. ಹೀಗಾಗಿ  ಜನ ಡಾಕ್ಟರ್ ಬಳಿ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ. ಅದರಲ್ಲೂ ಇದೀಗ ಬಾಲನರೆ ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಆದರೆ ಈ ಬಾಲನೆರೆ ತಡೆಗಟ್ಟಲು ಕೆಲವೊಂದು ಮನೆಮದ್ದು ಇಲ್ಲಿದೆ. ನೆಲ್ಲಿಕಾಯಿ ರಸ ತಲೆಕೂದಲ ....


ಮುಂದೆ...
11 months ago lifestyle
ರಾತ್ರಿ ಮಲಗುವ ಮುನ್ನ ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ
ಜೀವನಶೈಲಿಗಳು/ ಸೌಂದರ್ಯ 0

ಊಟ ಜಾಸ್ತಿ ಮಾಡಿದ್ರೆ ಅಷ್ಟೆ ದೇಹದ ತೂಕ ಹೆಚ್ಚಾಗುತ್ತೆ ಅಂದ್ರೆ ಅದು ನಿಮ್ಮ ತಪ್ಪು ಕಲ್ಪನೆಯೇ ಸರಿ. ರಾತ್ರಿ ಮಲಗುವ ಮುನ್ನ ಮಾಡುವ ಕೆಲ ತಪ್ಪುಗಳಿಂದಲೂ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ತಿಳಿದು ತಿಳಿಯದೇ ಈ ಕೆಳಗಿನ ತಪ್ಪುಗಳನ್ನು ಮಾಡಿ ದೇಹದ ತೂಕ ಹೆಚ್ಚು ಮಾಡಿಕೊಂಡು ಆಮೇಲೆ ಪರಿತಪಿಸುತ್ತಾರೆ. ಆದ್ರೆ ಈ ಲೇಖನವನ್ನು ಓದಿದ ಮೇಲೆ ಈ ಮುಂಚೆ ಮಾಡಿದ ತಪ್ಪನ್ನು ಮಲಗುವ ಮುಂಚೆ ಮಾಡದೇ ಇದ್ರೆ ನಿಮಗೇ ಒಳಿತು. ನಾವು ಹೇಳಿದ ಹಾಗೆ ಮಾಡಿದ್ರೆ ನಿದ್ರೆ ಆರಾಮಾಗಿ ಮಾಡಿ ....


ಮುಂದೆ...
11 months ago lifestyle
ಹಲ್ಲು ಉಜ್ಜೋಕು ನಿಯಮಗಳಿವೆ ಅಂದ್ರೆ ನೀವು ನಂಬಲೇಬೇಕು
ಜೀವನಶೈಲಿಗಳು/ ಸೌಂದರ್ಯ 0

ನಾವೆಲ್ಲ ದಿನನಿತ್ಯ ಹಲ್ಲು ಉಜ್ಜುತ್ತೇವೆ. ಆದ್ರೆ ಹಲ್ಲು ಹೇಗೆ ಉಜ್ಜೋದು? ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅನ್ನೋದು ಎಷ್ಟೋ ಜನ್ರಿಗೆ ಗೊತ್ತೇಯಿಲ್ಲ. ಹಲ್ಲು ಉಜ್ಜೋಕೆ  ಕ್ರಮಗಳಿವೆಯಾ..? ಹಲ್ಲು ಉಜ್ಜುವಿಕೆಗೂ ಇಷ್ಟೆಲ್ಲಾ ಪ್ರಾಮುಖ್ಯತೆಗಳಿವೆ ಅಂದ್ರೆ ನೀವು ನಂಬಲೇಬೇಕು. ಹಲ್ಲು ಉಜ್ಜೋದ್ರಲ್ಲೂ ಕೂಡ ಕೆಲ ನಿಯಮಗಳಿವೆ. ಈ ನಿಯಮಗಳನ್ನು ನೀವು ಚಾಚೂ ತಪ್ಪದೇ ಪಾಲಿಸಿದ್ರೆ ಖಂಡಿತವಾಗಿಯೂ ನೀವು ದೀರ್ಘ ಕಾಲ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಕಿರು ....


ಮುಂದೆ...
11 months ago lifestyle
ಕಲೆ ರಹಿತ ತ್ವಚೆಗಾಗಿ ಇಲ್ಲಿವೆ ಟಾಪ್ 3 ಹೋಮ್ ಮೇಡ್ ಫೇಸ್ ಪ್ಯಾಕ್ ಗಳು
ಜೀವನಶೈಲಿಗಳು/ ಸೌಂದರ್ಯ 0

ಪ್ರತಿಯೊಬ್ಬ ಹೆಣ್ಣುಮಕ್ಕಳು ಸುಂದರವಾದ, ಕಲೆ ಮುಕ್ತ ತ್ವಚೆ ನಮ್ಮದಾಗಬೇಕೆಂಬುದು ಬಯಸುತ್ತಾರೆ. ಆದರೆ ಇಂದಿನ ಬ್ಯೂಸಿ ಶೆಡ್ಯೂಲ್ ನಿಂದಾಗಿ, ಪರಿಸರ ಮಾಲಿನ್ಯದಿಂದಾಗಿ, ಸೂರ್ಯ ಸೂಸುವ ವಿಕಿರಣಗಳಿಂದಾಗಿ ಆರೋಗ್ಯಕರ ತ್ವಚೆಯನ್ನು ಹೊಂದುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಮೊಡವೆಗಳು, ಟ್ಯಾನಿಂಗ್, ಬ್ಲಾಕ್ ಹೆಡ್ಸ್ ಇತರೆ ತೊಂದರೆಗಳು ಇನ್ನಿಲ್ಲದಂತೆ ಕಾಡಲು ಶುರುವಾಗುತ್ತವೆ. ಇದನ್ನೆಲ್ಲಾ ಗಮನಿಸಿದ ಸ್ಕಿನ್ ಕೇರ್ ಇಂಡಸ್ಟ್ರಿಗಳು ಎಂತೆಂತಹ ಕ್ರೀಮ್ ಗಳನ್ನು, ಫೇಸ್ ವಾಶ್ ಗಳನ್ನು ....


ಮುಂದೆ...
11 months ago lifestyle
ಕಾಫಿ ಪುಡಿಯಿಂದ ಡಾರ್ಕ್ ಸರ್ಕಲ್ ಮಾಯ
ಜೀವನಶೈಲಿಗಳು/ ಸೌಂದರ್ಯ 0

ಕೆಲಸದ ಒತ್ತಡ , ಜೀವನ ಶೈಲಿ, ವಂಶಪಾರಂಪರೆ ಹೀಗೆ ಹಲವು ಕಾರಣಗಳಿಂದಾಗಿ ಡಾರ್ಕ್ ಸರ್ಕಲ್ ಎಂಬ ಭೂತ ನಮ್ಮನ್ನ ಕಾಡುತ್ತದೆ. ಅಲ್ಲದೆ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿ ಭಾದಿಸುತ್ತದೆ. ಅದರಲ್ಲೂ ಮಹಿಳೆಯರಿಗೆ ಕಣ್ಣಿನ ಸುತ್ತ ಕಪ್ಪು ಮೂಡಿದರೆ ಏನೂ ಒಂದು ರೀತಿಯ ಹಿಂಜರಿಕೆ. ಇದಕ್ಕಾಗಿ ಅದೆಷ್ಟೋ ಮಂದಿ ಸಿಕ್ಕ ಸಿಕ್ಕ ಕ್ರೀಮ್ ಗಳನ್ನೆಲ್ಲಾ ಬಳಸಿದ್ದು ಇದೆ.ಬಟ್ ನೋ ಯೂಸ್. ಆದರೆ ನಿಮಗೆ ಗೊತ್ತಾ, ನಿಮ್ಮ ಅಡುಗೆ ಮನೆಯಲ್ಲಿ ಯಾವಾಗಲು ಇರುವ ವಸ್ತುವೊಂದು ನಿಮ್ಮ ಡಾರ್ಕ್ ....


ಮುಂದೆ...
11 months ago lifestyle
ತಲೆಕೂದಲು ಸಮಸ್ಯೆ ನಿವಾರಣೆಗೆ ಇಲ್ಲಿದೆ ಸೂತ್ರ
ಜೀವನಶೈಲಿಗಳು/ ಸೌಂದರ್ಯ 0

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಬಾಲ್ಡ್ ನೆಸ್ ತುಂಬಾನೆ ಕಾಮನ್ ಸಮಸ್ಯೆ. ಇದರ ಪರಿಹಾರಕ್ಕೆ ತಲೆಕೆಡಿಸಿಕೊಂಡೆ ಅರ್ದ ಕೂದಲು ಉದುರಿಹೋಗುವುದು ಇದೆ. ಆದರೆ ತಲೆಕೂದಲು ಸಮಸ್ಯೆಗೆ ಹರಳೆಣ್ಣೆ ಅಂಗೈ ಜೌಷಧಿಹರಳೆಣ್ಣೆಯಲ್ಲಿ ರಿಸಿನೋಲೈಕ್ ಆಸಿಡ್ ಹಾಗೂ ಪ್ಯಾಟಿ ಆಸಿಡ್ ಗಳು ಹೆಚ್ಚಾಗಿರುವುದರಿಂದ ತಲೆಕೂದಲ ಸಮಸ್ಯೆ ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ಎಣ್ಣೆಯಲ್ಲಿ ವಿಟಮಿನ್ ಇ, ಪ್ರೋಟಿನ್, ಮಿನರಲ್ಸ್ ಮತ್ತು ಆಂಟಿ ಫಂಗಲ್ ಮತ್ತು ಆಂಟಿ ....


ಮುಂದೆ...
11 months ago lifestyle
ಚರ್ಮ ಕಾಂತಿ ಹೆಚ್ಚಿಸಬೇಕೆ ; ಫೇಶಿಯಲ್ ಬೇಡ ; ಇದನ್ನು ಅನುಸರಿಸಿ
ಜೀವನಶೈಲಿಗಳು/ ಸೌಂದರ್ಯ 0

ವಯಸ್ಸನ್ನು ಮರೆಮಾಚುವುದು ಅನಿವಾರ್ಯ. ಈಗಿನ ಪರಿಸರದಲ್ಲಿ ಎಲ್ಲರೂ ವಯಸ್ಸಿಗಿಂತ ಮಿಗಿಲಾಗಿ ವಯೋ ವಿಭಿನ್ನವಾಗಿ ಕಾಣುತ್ತಾರೆ.  ಅದರಲ್ಲೂ ಸ್ತ್ರೀಯರು ಸೌಂದರ್ಯ ಕಾಪಾಡಲು ಏನೆಲ್ಲಾ ಕಸರತ್ತು ಮಾಡುತ್ತಿರುತ್ತಾರೆ. ಅದಕ್ಕೆ  ಇಲ್ಲಿದೆ  ಸುಲಭ ಸೂತ್ರ 30 ವರ್ಷ ಸುತ್ತ ಮುತ್ತಲ ವಯಸ್ಸಿನಲ್ಲೇ ನಿಮ್ಮ ಚರ್ಮ ಸುಕ್ಕು ಬೀಳಲು ಪ್ರಾರಂಭಿಸಿದ್ದರೆ ನಿಯಮಿತವಾಗಿ ದಾಳಿಂಬೆ ಹಣ್ಣನ್ನು ತಿನ್ನಿರಿ.ತಾರುಣ್ಯ ಕಾಪಾಡಲು ದಾಳಿಂಬೆ ಉತ್ತಮ ಮದ್ದು ಎಂಬುದು ಇದೀಗ ಸಂಶೋಧನೆಯಿಂದ ಗೊತ್ತಾಗಿದೆ. ....


ಮುಂದೆ...
11 months ago lifestyle
ನೇಲ್‍ಪಾಲಿಷ್ ಹಚ್ಚುವ ಮುನ್ನ ಇದನ್ನೊಮ್ಮೆ ಓದಿ ಬಿಡಿ
ಜೀವನಶೈಲಿಗಳು/ ಸೌಂದರ್ಯ 0

ಯುವತಿಯರು ಅಡಿಯಿಂದ ಮುಡಿಯವರೆಗೂ ಅಲಂಕಾರ ಮಾಡಿಕೊಳ್ತಾರೆ. ಅದ್ರಲ್ಲಿ ಕೈ ಕಾಲುಗಳ ಉಗುರು ಹೊರೆತಾಗಿಲ್ಲ. ಕಾಲೇಜ್ ಹೋಗೊ ಹುಡುಗಿಯರು ಈ ನೇಲ್ ಪಾಲಿಷ್ ಅಥವಾ ನೇಲ್ ಆರ್ಟ್‍ಗೆ ಹೆಚ್ಚಿನ ಆಧ್ಯತೆ ಕೊಡ್ತಾರೆ ಅನ್ನೋ ಮಾತು ಕೂಡ ಇದೆ. ಆದ್ರೆ ಎಲ್ಲರಿಗೂ ಈ ನೇಲ್ ಆರ್ಟ್ ಅಥವಾ ನೀಳವಾದ ಸುಂದರ ಉಗುರು ಮೆಂಟೇನ್ ಮಾಡೋಕೆ ಆಗೋದಿಲ್ಲ. ನೇಲ್ ಪಾಲಿಷ್ ಮತ್ತು ಇದನ್ನು ಲೇಪಿಸಿಕೊಳ್ಳುವ ವಿಧಾನ ಬಗ್ಗೆ ಕೆಲ ಟಿಪ್ಸ್ ಇಲ್ಲಿದೆ. ಉಗುರು ಉದ್ದ ಮತ್ತು ಅಗಲಾಗಿದ್ರೆ ನೇಲ್ ಆರ್ಟ್ ಮಾಡೋಕೆ ತುಂಬಾ ....


ಮುಂದೆ...
1 year ago lifestyle
ಬಿಂದುವಿನಿಂದ ಬಂದ ಬಿಂದಿ, ಈಗ ವಿವಿಧ ಡಿಸೈನ್‍ಗಳಲ್ಲಿ
ಜೀವನಶೈಲಿಗಳು/ ಸೌಂದರ್ಯ 0

ಸೌಂದರ್ಯ ಸಾಮಾಗ್ರಿಯಾಗಿರುವ ಈ ಬಿಂದಿಯ ಕಥೆ ಕೇಳಿ. ಸಿಂಧೂರ, ಕುಂಕುಮ ಇದು ಹೆಣ್ಣಿನ ಅಲಂಕಾರಿಕ ವಸ್ತುಗಳಲ್ಲಿ ಪ್ರಮುಖವಾದುದು ಮತ್ತು ಅಷ್ಟೇ ಆಕರ್ಷಿತವಾದದ್ದು. ಹೆಣ್ಣು ಭಾರತೀಯ ಸಂಸ್ಕಂತಿಯ ಪ್ರತೀಕವಾದರೆ ಆಕೆ ಧರಿಸುವ ಸಿಂಧೂರ ಭಾರತೀಯ ನಾರಿಯ ಪ್ರತೀಕ. ನಮ್ಮ ಹಿಂದೂ ಧರ್ಮದ ಪ್ರಕಾರ ಹಣೆಯಲ್ಲಿ ಧರಿಸುವ ಈ ಸಿಂಧೂರ ಮೂರನೇ ಕಣ್ಣಿದ್ದಂತೆ.ಸಿಂಧೂರ ಧರಿಸುವುದು ಪ್ರಾರಂಭವಾದದ್ದು ಬಿಂದುವಿನಿಂದ. ಮೊದಮೊದಲು ಸಿಂಧೂರವೆಂದರೆ ಹಣೆಯ ....


ಮುಂದೆ...
1 year ago lifestyle
ಸೆಂಟ್ ಬಳಸೋ ಮುನ್ನ ಈ ರೀತಿ ಮಾಡೋದನ್ನ ಮರೀಬೇಡಿ :
ಜೀವನಶೈಲಿಗಳು/ ಸೌಂದರ್ಯ 0

ಯಾವುದಾದರೇನು ಬಿಡು ಅಂದುಕೊಳ್ಳದೆ ಸಂದರ್ಭಕ್ಕೆ ತಕ್ಕಂತೆ ಸೆಂಟ್ ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ನೀವೇನು ಮಾಡಬೇಕೆಂದರೆ…. ಮೊದಲು ನಿಮ್ಮ ಚರ್ಮದ ಗುಣವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಣ ಚರ್ಮನಾ ಅಥವಾ ಎಣ್ಣೆ ಚರ್ಮವೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ನಿಮ್ಮ ಚರ್ಮ ಒಣ ಚರ್ಮವಾದರೆ ಸ್ವಲ್ಪ ಗಾಢವಾಗಿರುವ ಸೆಂಟ್ ಆಯ್ಕೆ ಮಾಡಿಕೊಳ್ಳಬೇಕು. ಸೆಂಟ್ ಆಯ್ಕೆ ಮಾಡಿಕೊಳ್ಳುವ ಮುನ್ನ ನೀವು ಉಪಯೋಗಿಸುವ ಇತರೆ ಸೌಂದರ್ಯ ಸಾಧನಗಳನ್ನೂ ಗಣನೆಗೆ ....


ಮುಂದೆ...
1 year ago lifestyle
ಒಂದೇ ದಿನದಲ್ಲಿ ಮೊಡವೆ ಮಾಯ ಮಾಡೋ ಮನೆಮದ್ದು
ಜೀವನಶೈಲಿಗಳು/ ಸೌಂದರ್ಯ 0

ಮಹಿಳೆಯರಿಗೆ ಮೊಡವೆಗಳು ಅಂದ್ರೆ ಅದು ಸರ್ವೇ ಸಮಾನ್ಯ. ಮುಖದ ಮೇಲೆ ಮೊಡುವೆ ಮೂಡೋಕೆ ಅದೆಷ್ಟೋ ಕಾರಣಗಳಿವೆ. ಅದ್ರಲ್ಲಿ ಮುಖ್ಯ ಕಾರಣ ಅಂದ್ರೆ ದಿನೇ ದಿನೇ ಹೆಚ್ಚುತ್ತಿರುವ ಮಾಲಿನ್ಯ. ಇದ್ರ ಜೊತೆಗೆ ನಾವು ಸೇವಿಸುವ ಆಹಾರ ಕೂಡ ಮುಖದ ಮೇಲೆ ಮೊಡವೆ ಮೂಡೋಕೆ ಕಾರಣವಾಗುತ್ತೆ. ಅತಿಯಾದ ಎಣ್ಣೆ ಪದಾರ್ಥ ತಿನ್ನೋದು ಅಥವಾ ಅತಿಯಾಗಿ ನಾನ್‍ವೆಜ್ ತಿಂದ್ರೆ ಕೂಡ ಮೊಡವೆ ಮೂಡುತ್ತವೆ. ಮೊಡವೆ ಮೂಡೋಕೆ ಕಾರಣ ತಿಳಿದುಕೊಳ್ಳೋದಕ್ಕಿಂತ ಹೆಚ್ಚಾಗಿ ಮೊಡವೆ ನಿವಾರಣೆಗೆ ಏನೆಲ್ಲಾ ಮನೆಮದ್ದು ....


ಮುಂದೆ...

ಕಾರ್ಯಕ್ರಮದ ಸಮಯ

ಬಾಲ್ಕನಿ ನ್ಯೂಸ್ ಪೋಲ್ಗಳು
ಹೊಸ ಬಿಡುಗಡೆ

ಫೇಸ್ಬುಕ್

ಟ್ವಿಟರ್